ನವದೆಹಲಿ: ಕ್ರಿಕೆಟ್ನಲ್ಲಿ ಭಾರತ ತಂಡದಲ್ಲಿ ಮಿಂಚಿ ಸದ್ಯ ಮರೆಯಾಗಿರುವ ಗೌತಮ್ ಗಂಭೀರ್ ತಮ್ಮ ರಾಜಕೀಯ ಜೀವನದ ಮೊದಲ ಇನಿಂಗ್ಸ್ನಲ್ಲೇ ಜಯಗಳಿಸುವ ವಿಶ್ವಾಸದಲ್ಲಿದ್ದಾರೆ.
ದೆಹಲಿ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೌತಮ್ ಗಂಭೀರ್ ತಮ್ಮ ಪ್ರತಿಸ್ಪರ್ಧಿ ಆಡಳಿತ ಪಕ್ಷವಾದ ಎಎಪಿಯ ಅತಿಶಿ ಹಾಗೂ ಕಾಂಗ್ರೆಸ್ನ ಅರವಿಂದರ್ ಸಿಂಗ್ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.
ದೀರ್ಘ ಸಮಯದಿಂದ ಬಿಜೆಪಿಯನ್ನು ಸಮರ್ಥಿಸುತ್ತಿರುವ ಗೌತಮ್ ಗಂಭೀರ್ ಕಳೆದ ತಿಂಗಳಷ್ಟೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಗೌತಮ್ ಗಂಭಿರ್ರನ್ನು ಕಣಕ್ಕಿಳಿಸಿದೆ.
ಗೌತಮ್ ವಿರುದ್ಧ ಗೆಲುವು ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್ ಪಾರ್ಟಿ ಪಕ್ಷ ಬಿಟ್ಟು ಹೋಗಿದ್ದ ಅರವಿಂದರ್ ಸಿಂಗ್ರನ್ನು ಮತ್ತೆ ಮನವೊಲಿಸಿ ಕರೆತಂದು ಕಾಂಗ್ರೆಸ್ ಪೂರ್ವ ದೆಹಲಿಯಿಂದ ಕಣಕ್ಕಿಳಿಸಿದೆ. ಅರ್ವಿಂದರ್ ಸಿಂಗ್ ಶೀಲಾ ದೀಕ್ಷಿತ್ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.