ಕರ್ನಾಟಕ

karnataka

ETV Bharat / briefs

ಹುತಾತ್ಮ ಯೋಧರಿಗೆ ಬಿಜೆಪಿ ಯುವ ಮೋರ್ಚಾ ಶ್ರದ್ಧಾಂಜಲಿ - BJP youth morcha

ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು. ಪದೇಪದೆ ಕ್ಯಾತೆ ತೆಗೆಯುತ್ತಿರುವುದಕ್ಕೆ ಭಾರತೀಯ ಸೈನ್ಯ ತಕ್ಕ ಪಾಠ ಕಲಿಸಲಿದೆ.

ಕುಷ್ಟಗಿ
ಕುಷ್ಟಗಿ

By

Published : Jun 17, 2020, 9:40 PM IST

ಕುಷ್ಟಗಿ (ಕೊಪ್ಪಳ) :ಭಾರತ -ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗೌರವ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ನಮ್ಮ ದೇಶದ ಲಡಾಖ್ ಗಾಲ್ವಾನ್ ವ್ಯಾಲಿಯಲ್ಲಿ ಚೀನಾ ನಮ್ಮ ದೇಶದ ಮೇಲೆ ಕಾಲು ಕೆದರಿ ಸಂಘರ್ಷಕ್ಕೆ ಇಳಿದು ನಮ್ಮ ಸೈನಿಕರ ತಾಳ್ಮೆ ಪರೀಕ್ಷಿಸುತ್ತಿದೆ. ಚೀನಾ ಪದೇಪದೆ ಕ್ಯಾತೆ ತೆಗೆಯುತ್ತಿರುವುದಕ್ಕೆ ಭಾರತೀಯ ಸೈನ್ಯ ತಕ್ಕ ಪಾಠ ಕಲಿಸಲಿದೆ ಎಂದರು.

ಬಳಿಕ ದೊಡ್ಡಬಸವ ಸುಂಕದ್ ಮಾತನಾಡಿ, ಚೀನಾ ಸಂಘರ್ಷದಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದಾರೆ. 43 ಚೀನಾ ಸೈನಿಕರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ತಿಳಿಸಿದರು. ಈ ವೇಳೆ ವೀರೇಶ್ ನಾಯಕ್, ನಾಗರಾಜ್ ಹಿರೇಮಠ, ಚಂದ್ರು ಪತ್ತಾರ್, ಮಂಜು ಕಾಳಾಪೂರಮಠ, ಶರಣು ಪಾಟೀಲ, ಮಲ್ಲು ದೇಸಾಯಿ ಮೊದಲಾದವರಿದ್ದರು.

ABOUT THE AUTHOR

...view details