ಚಂಡೀಗಢ್:ಮತದಾನ ಮಾಡಲು ತೆರಳುತ್ತಿದ್ದ ವೇಳೆ ಬಿಜೆಪಿ ಸಂಸದೆ ಹಾಗೂ ಅಭ್ಯರ್ಥಿ ಕಿರಣ್ ಖೇರ್ ಮತಗಟ್ಟೆ ಬಳಿ ಮುಕ್ಕರಿಸಿ ಬಿದ್ದಿರುವ ಘಟನೆ ನಡೆದಿದೆ.
ವೋಟಿಂಗ್ ಮಾಡಲು ತೆರಳುತ್ತಿದ್ದ ವೇಳೆ ಮುಕ್ಕರಿಸಿ ಬಿದ್ದ ಬಿಜೆಪಿ ಸಂಸದೆ ಕಿರಣ್ ಖೇರ್! - ಮಾಧ್ಯಮ
ಮತಗಟ್ಟೆ ಬಳಿ ವೋಟಿಂಗ್ ಮಾಡಲು ಬರುತ್ತಿದ್ದಾಗ ಮಾಧ್ಯಮದವರು ಪ್ರಶ್ನೆ ಕೇಳಲು ಮುಂದಾಗಿದ್ದು, ಈ ವೇಳೆ ಆಯಾತಪ್ಪಿದ ಕಿರಣ್ ಖೇರ್ ಕೆಳಗೆ ಬಿದ್ದಿದ್ದಾರೆ
ಮುಕ್ಕರಿಸಿ ಬಿದ್ದ ಕಿರಣ್ ಖೇರ್
ಮತಗಟ್ಟೆ ಬಳಿ ಪತ್ನಿ ಅನುಪಮ್ ಖೇರ್ ಜತೆ ತೆರಳಿ ವೋಟ್ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ. ಮಾಧ್ಯಮದವರು ಕಿರಣ್ ಖೇರ್ಗೆ ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ. ಅದೃಷ್ಠವಶಾತ್ ಯಾವುದೇ ಗಾಯಗಳಾಗಿಲ್ಲ.
ತಕ್ಷಣ ಅವರನ್ನ ರಕ್ಷಣಾ ಸಿಬ್ಬಂದಿ ಮೇಲೆ ಎತ್ತಿದ್ದಾರೆ. ತದನಂತರ ಮತಗಟ್ಟೆಯೊಳಗೆ ಹೋಗಿ ವೋಟ್ ಮಾಡಿದ್ದಾರೆ. ವೋಟ್ ಮಾಡಿದ ಬಳಿಕ ಮಾತನಾಡಿರುವ ಕಿರಣ್, ಈ ಸಲವೂ ತಾವೂ ಗೆಲುವು ದಾಖಲು ಮಾಡುವುದಾಗಿ ವಿಶ್ವಾಸ ವ್ಯಕ್ತಪಿಡಿದ್ದಾರೆ.