ಕರ್ನಾಟಕ

karnataka

ETV Bharat / briefs

ಪ.ಬಂಗಾಳ ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಪ್ರತಿಭಟನೆ:  ಸಿಟಿ ರವಿ - West Bengal Bjp activists murder

ಪ.ಬಂಗಾಳದ ಹತ್ಯಾ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸವಿದೆ. 280ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಹತ್ಯಾ ರಾಜಕಾರಣವನ್ನು ಮುಂದುವರಿಸುವ ಕೆಲಸ ಟಿಎಂಸಿ ಮಾಡುತ್ತಿದೆ.

Bjp protester against west Bengal bjp activist murder
Bjp protester against west Bengal bjp activist murder

By

Published : May 4, 2021, 5:59 PM IST

ಚಿಕ್ಕಮಗಳೂರು :ಪ.ಬಂಗಾಳದಲ್ಲಿ 6 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಹತ್ಯಾ ರಾಜಕೀಯ ವಿರೋಧಿಸಿ ನಾಳೆ ಬಿಜೆಪಿಯಿಂದ ರಾಷ್ಟ್ರಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಪ.ಬಂಗಾಳದ ಹತ್ಯಾ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸವಿದೆ. 280ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಹತ್ಯಾ ರಾಜಕಾರಣವನ್ನು ಮುಂದುವರಿಸುವ ಕೆಲಸ ಟಿಎಂಸಿ ಮಾಡುತ್ತಿದೆ ಎಂದು ಹೇಳಿದರು.

ವ್ಯಾಕ್ಸಿನ್ ಉಪಯೋಗಿಸಿಕೊಳ್ಳದೇ ವೇಸ್ಟ್ ಆಗಿದೆ

ವ್ಯಾಕ್ಸಿನ್ ಕುರಿತು ಮಾತನಾಡಿ, ಬಿಜೆಪಿ ವ್ಯಾಕ್ಸಿನ್ ಜೀವ ತೆಗೆಯುವುದಕ್ಕೆ ಮಾಡಿದ್ದಾರೆ. ಈ ವ್ಯಾಕ್ಸಿನ್ ತಗೊಂಡ್ರೆ ಮಕ್ಕಳಾಗಲ್ಲ ಅಂತಾ ಅಪಪ್ರಚಾರ ಮಾಡಿದ್ರು. ಆಮೇಲೆ ಅವರೇ ಕದ್ದು ಹೋಗಿ ವ್ಯಾಕ್ಸಿನ್ ತಗೊಂಡ್ರು, ಆದರೆ ಜನರು ಸಾಯುತ್ತಿದ್ದಾರೆ.

ಈ ಹಿಂದೆ ವ್ಯಾಕ್ಸಿನ್ ಕುರಿತು ರಾಜಕೀಯ ಅಪಪ್ರಚಾರ ಮಾಡಿದ್ರು. ಈಗ ವ್ಯಾಕ್ಸಿನ್​​​ಗೆ‌ ಬೇಡಿಕೆಯಿದೆ, ಈ ಹಿಂದೆ ಟಾರ್ಗೆಟ್ ರೀಚ್ ಆಗ್ತಿರಲಿಲ್ಲ. ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಉಪಯೋಗಿಸಿಕೊಳ್ಳದೇ ವೇಸ್ಟ್ ಆಗಿದೆ. ಇದಕ್ಕೆಲ್ಲ ಕಾರಣ ರಾಜಕೀಯ ಮುಖಂಡರು ಅನುಮಾನ ಹುಟ್ಟುಹಾಕಿದ್ದು. ಈಗ ಲಸಿಕೆಗೆ ಎಲ್ಲೆಡೆ ಅಭಾವ ಸೃಷ್ಟಿಯಾಗಿದೆ. ಇದರ ಹೊಣೆಯನ್ನು ಎಲ್ಲರೂ ಹೊತ್ತುಕೊಳ್ಳಬೇಕು ಎಂದು ಹೇಳಿದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಸಮಸ್ಯೆ ಕುರಿತು ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲೂ 3 ದಿನದ ಹಿಂದೆ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ನಾಳೆಯೊಳಗೆ ಆಕ್ಸಿಜನ್ ಸಿಗದಿದ್ದರೇ ಸಮಸ್ಯೆ ಆಗುತ್ತೆ ಅಂದ್ರು. ಈ ಕುರಿತು ಡಿಸಿಯವರು ನನ್ನ ಗಮನಕ್ಕೆ ತಂದ್ರು. ಕೂಡಲೇ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದ್ದೆ.

ತೆರೆಮರೆ ಹಿಂದೆ ಜೀವ ಉಳಿಸೋ ಕೆಲಸ ಮಾಡಿದ್ದೀವಿ

ಒಂದು ವೇಳೆ ಕಾನೂನು ನಂಬಿಕೊಂಡು ಕೂತಿದ್ರೆ ಜೀವ ಹೋಗಿರೋದು. ಚಾಮರಾಜನಗರದ ಪರಿಸ್ಥಿತಿ ಬಂದಿದ್ದರೆ ಸುದ್ದಿ ಆಗ್ತಿತ್ತು. ತೆರೆಮರೆ ಹಿಂದೆ ಜೀವ ಉಳಿಸೋ ಕೆಲಸ ಮಾಡಿದ್ದೀವಿ. ಆರೋಪ ಮಾಡುವವರು ಆರೋಪ ಮಾಡುವುದಕ್ಕಾಗಿಯೆ ಕಾಯ್ತಾ ಇರ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ABOUT THE AUTHOR

...view details