ಅಮೇಠಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಅವರನ್ನು ಭಾನುವಾರ ಬೆಳಗ್ಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈಯಲಾಗಿದ್ದು, ಅಂತಿಮ ಶವ ಸಂಸ್ಕಾರದಲ್ಲಿ ಸ್ಮೃತಿ ಇರಾನಿ ಅವರು ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆಗೆ ತೆರಳಿ ಮನೆಗೆ ವಾಪಾಸಾಗಿ ಮನೆಯ ಹೊರಗೆ ಮಲಗಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುರೇಂದ್ರ ಸಿಂಗ್ ಕೊನೆಯುಸಿರೆಳೆದಿದ್ದಾರೆ.
ಮೃತನ ಸ್ವಗ್ರಾಮ ಬರೌಲಿಯಲ್ಲಿ ಶವ ಸಂಸ್ಕಾರದ ಕಾರ್ಯಕರ್ತನ ಶವಕ್ಕೆ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಬಿಜೆಪಿ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಘಟನೆಬಳಿಕ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನುವಶಕ್ಕೆ ಪಡೆದು ಉನ್ನತ ಮಟ್ಟದ ತನಿಖೆ ಅರಂಭಿಸಿದ್ದಾರೆ. ಸುರೇಂದ್ರ ಸಿಂಗ್ ಅವರು ಸ್ಮೃತಿ ಇರಾನಿ ಅವರಆಪ್ತರಾಗಿ ಗುರುತಿಸಿಕೊಂಡಿದ್ದು ತಳಮಟ್ಟದಲ್ಲಿ ಭಾರೀ ಶ್ರಮ ವಹಿಸಿದ್ದರು ಎಂದು ಹೇಳಲಾಗಿದೆ.
ಇದುವರೆಗೆ ಅಮೇಠಿಯಲ್ಲಿ ಶಾಂತಿಯುತ ವಾತಾವರಣವಿದ್ದು, ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.