ಕರ್ನಾಟಕ

karnataka

ETV Bharat / briefs

ದೀದಿ ನಾಡಲ್ಲಿ ಮತ್ತೆ ಘರ್ಷಣೆ​... ಬಿಜೆಪಿ ಸಂಸದನ ಕಾರು ಜಖಂ - ತೃಣಮೂಲ ಕಾಂಗ್ರೆಸ್

ಘರ್ಷಣೆ ವೇಳೆ ಮತಗಟ್ಟೆ ಬಳಿಯಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಕಾರಿನ ಗಾಜು ಪುಡಿ ಪುಡಿಯಾಗಿದೆ.

ಘರ್ಷಣೆ​

By

Published : Apr 29, 2019, 10:30 AM IST

ಅಸಾನ್ಸೋಲ್​(ಪ.ಬಂಗಾಳ): ಮತದಾನದ ವೇಳೆ ಉದ್ವಿಗ್ನವಾಗುವ ಪಶ್ಚಿಮ ಬಂಗಾಳ ಇಂದಿನ ವೋಟಿಂಗ್ ಪ್ರಕ್ರಿಯೆಯ ವೇಳೆಯೂ ಘರ್ಷಣೆಗೆ ಸಾಕ್ಷಿಯಾಗಿದೆ.

ತೃಣಮೂಲ ಕಾಂಗ್ರೆಸ್ ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾಗಿದ್ದು ಇದೇ ವೇಳೆ ಮತಗಟ್ಟೆ ಬಳಿಯಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಕಾರಿನ ಗಾಜು ಪುಡಿ ಪುಡಿಯಾಗಿದೆ.

ಟಿಎಂಸಿ ಕಾರ್ಯಕರ್ತರು ಮತದಾರರನ್ನು ವೋಟ್ ಮಾಡದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಬಾಬುಲ್ ಸುಪ್ರಿಯೋ ಆರೋಪ ಮಾಡಿದ್ದಾರೆ.

ಘರ್ಷಣೆ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆ ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ABOUT THE AUTHOR

...view details