ಕರ್ನಾಟಕ

karnataka

ETV Bharat / briefs

ಉಮೇಶ ಜಾಧವ್ ಕಲಿಯುಗದ 'ವಿಭೂಷಣ', ರಾವಣರಾಜ್ಯ ತೊರೆದು ರಾಮರಾಜ್ಯ ಕಟ್ಟಲಿದ್ದಾರೆ: ಶಾಸಕ ರಾಜ್​ಕುಮಾರ್​ ಪಾಟೀಲ್...! - ರಾಮರಾಜ್ಯ

2014 ರಲ್ಲಿ ದೇಶದಲ್ಲಿ ಬಿಜೆಪಿ ಗಾಳಿ ಬೀಸಿತ್ತು,ಆದರೆ ಈ ಬಾರಿ ಬಿರುಗಾಳಿ ಬೀಸಲಿದ್ದು ದೇಶಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹುಮನಾಬಾದ್​ನ ಮಾಜಿ ಶಾಸಕ ಸುಭಾಷ್ ಕಲ್ಲೂರ ಅಭಿಪ್ರಾಯ ಪಟ್ಟಿದ್ದಾರೆ.

ಶಾಸಕ ರಾಜ್​ಕುಮಾರ್​ ಪಾಟೀಲ್

By

Published : Apr 10, 2019, 3:42 AM IST

ಬೀದರ್: ಕಲ್ಬುರ್ಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್​ ರಾಮಾಯಣದ ವಿಭೂಷಣನಂತೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ್ದು ಮೇ 23 ಕ್ಕೆ ಪಟ್ಟಾಭೀಷೇಕ ಆಗೋದು ಗ್ಯಾರಂಟಿ ಎಂದು ಸೇಡಂ ಬಿಜೆಪಿ ಶಾಸಕ ರಾಜಕುಮಾರ್​ ಪಾಟೀಲ್ ಹೇಳಿದ್ದಾರೆ.

ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ಸಮಾವೇಶ ನಿಮಿತ್ತ ಈಟಿವಿ ಭಾರತದೊಂದಿಗೆ ಶಾಸಕ ರಾಜಕುಮಾರ್​ ಪಾಟೀಲ್ ಹಾಗೂ ಹುಮನಾಬಾದ್​ನ ಮಾಜಿ ಶಾಸಕ ಸುಭಾಷ್ ಕಲ್ಲೂರ ಅವರು ತಮ್ಮ ಮನದಾಳದ ಮಾತುಗಳು ಹಂಚಿಕೊಂಡಿದ್ದಾರೆ.

ಸೇಡಂ ಬಿಜೆಪಿ ಶಾಸಕ ರಾಜಕುಮಾರ್​ ಪಾಟೀಲ್ ಜೊತೆ ಚಿಟ್​ಚಾಟ್​

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ದೇಶವನ್ನು ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಏನಿಲ್ಲ. ಹೀಗಾಗಿ ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಭಾರತದ ಹೆಮ್ಮೆಯ ಪುತ್ರ ನರೇಂದ್ರ ಮೋದಿಗೆ ಅಧಿಕಾರ ನೀಡಬೇಕು ಎಂದು ಕೇಳಿಕೊಂಡರು.

ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಕಲ್ಬುರ್ಗಿ ಜಿಲ್ಲೆಯ ಆಳಂದ ಹಾಗೂ ಚಿಂಚೊಳಿ ವಿಧಾನಸಭೆ ಕ್ಷೇತ್ರಗಳು ಒಳಗೊಂಡಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪರ ಹವ ಇದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details