ಕರ್ನಾಟಕ

karnataka

ETV Bharat / briefs

ನೀರ ದಾಹ ತೀರಿಸಿಕೊಳ್ಳಲು ಹಕ್ಕಿಯ ಹೋರಾಟ! ಕೊನೆಯಲ್ಲಿ ಮನಕಲುಕುವ ದೃಶ್ಯ! - undefined

ನೀಲಾಕಾಶದಲ್ಲಿ ಸ್ವಚ್ಚಂದವಾಗಿ ತೇಲಾಡಿ ಚಿಲಿಪಿಲಿ ಕಲರವ ನೀಡುವ ಗುಬ್ಬಚ್ಚಿ, ಗೊರವಂಚಿ, ಕಾಗೆ ಸೇರಿದಂತೆ ಇತರೆ ಪಕ್ಷಿಗಳು ಬಿಸಿಲಿನ ಬೇಗೆಗೆ ತತ್ತರಿಸಿ, ಆಕಾಶದಲ್ಲಿ ಹಾರಾಡಲೂ ಆಗದೇ ಧರೆಗಿಳಿಯಲೂ ಆಗದೆ ವಿಪರೀತ ನಿರ್ಜಲೀಕರಣ ಸಮಸ್ಯೆ ಎದುರಿಸುತ್ತಿವೆ.

ನಿರ್ಜಲೀಕರಣ‌ ಸಮಸ್ಯೆಯಿಂದ ಬಸವಳಿದ ಪಕ್ಷಿ!

By

Published : May 19, 2019, 3:42 PM IST

ಬಳ್ಳಾರಿ: ಮೈಸುಡುವ ಬಿಸಿಲು, ಜೀವಜಲದ ಹುಡುಕಾಟ ಮನುಷ್ಯರಿಗೆ ಮಾತ್ರವಲ್ಲ, ಈಗ ಪ್ರಾಣಿ-ಪಕ್ಷಿಗಳನ್ನೂ ಆವರಿಸಿಕೊಂಡಿದೆ.

ತಾಲೂಕಿನ ರೂಪನಗುಡಿ ಹೋಬಳಿಯಲ್ಲಿ ಆಕಾಶದಿಂದ ಧರೆಗಿಳಿದ ಪಕ್ಷಿಯೊಂದು ನೀರಿಗಾಗಿ ತಡಕಾಡಿದೆ. ಈ ಹಕ್ಕಿ ವಿಪರೀತ ನೀರ ದಾಹ ಎದುರಿಸುತ್ತಿತ್ತು. ನೀರಡಿಕೆ ನಿವಾರಿಸಿಕೊಳ್ಳುವ ಸಲುವಾಗಿಯೇ ಹೋಬಳಿ ಮುಖ್ಯರಸ್ತೆಯಲ್ಲಿ ಹರಿಯುತ್ತಿದ್ದ ಚರಂಡಿ ನೀರು ಸೇವಿಸಲು ತನ್ನ ಮೊನಚಾದ ಬಾಯಿ ಚಾಚಿದೆ. ಬಾಯಾರಿಕೆ ನಿವಾರಿಸಿಕೊಳ್ಳುವಷ್ಟು ಶುದ್ಧ ನೀರು ಅಲ್ಲಿರದ ಕಾರಣ,ಮತ್ತೊಂದೆಡೆ ಹೋಗಿ ಅದು ನೀರು ಕುಡಿಯಲು ಆರಂಭಿಸುತ್ತದೆ.‌‌ ಅಲ್ಲಿಯೂ ಕೂಡ ಹಕ್ಕಿಗೆ ತೃಪ್ತಿ ಸಿಗಲಿಲ್ಲ. ಆಗ ಅದು ಬೇರೆಡೆಗೆ (ಚರಂಡಿ‌ ನೀರು ಹರಿಯುವ ರಸ್ತೆಯ ಮಧ್ಯಭಾಗದಲ್ಲಿ) ಹೋಗಿ ನೀರು‌ ಕುಡಿಯಲು ಶುರುಮಾಡುತ್ತೆ. ನೀರಿ‌ನ ದಾಹ ತೀರಿಸುವಷ್ಟರ ಮಟ್ಟಿಗೆ ತನ್ನ ಬಾಯಿಗೆ ನೀರು ಲಭ್ಯವಾಗದ ಕಾರಣ, ಏನೂ ತೋಚದಂತೆ ಸ್ವಲ್ಪಹೊತ್ತು ಅಲ್ಲಿಯೇ‌ ಕುಳಿತುಕೊಂಡ ಹಕ್ಕಿ ತನ್ನ ಆಯಾಸವನ್ನು ನೀಗಿಸಿಕೊಳ್ಳುತ್ತದೆ.

ಬಿರುಬಿಸಿಲು: ನಿರ್ಜಲೀಕರಣ‌ ಸಮಸ್ಯೆಯಿಂದ ಬಸವಳಿದ ಪಕ್ಷಿ!

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ದಾರಿ ಹೋಕರು ಪ್ಲಾಸ್ಟಿಕ್ ಜಗ್​ವೊಂದರಲ್ಲಿ ಶುದ್ಧ ಕುಡಿಯುವ ನೀರು ತಂದು ಆ ಪಕ್ಷಿಯ ಬಾಯಿಯೊಳಗೆ ಹಾಕುತ್ತಿದ್ದಂತೆಯೇ ನೀರು ಕುಡಿಯಲು‌ ಆತುರಾತುರವಾಗಿ ಹವಣಿಸುತ್ತಿರುವ ದೃಶ್ಯವಂತೂ ಮನಕಲುಕುವಂತಿದೆ.

For All Latest Updates

TAGGED:

ABOUT THE AUTHOR

...view details