ಕರ್ನಾಟಕ

karnataka

ETV Bharat / briefs

ಅರೇ ಇದೇನಾಯ್ತು..? ಐಸ್​ಕ್ರೀಂ ಪಾರ್ಲರ್​ನಲ್ಲಿ ಸರ್ವರ್​ ಆದ ಬಿಲ್​ ಗೇಟ್ಸ್, ವಾರನ್ ಬಫೆಟ್...! - ಟ್ವಿಟರ್

ಕೆಲ ದಿನಗಳ ಹಿಂದೆ ಡೈರಿ ಕ್ವೀನ್ ಎನ್ನುವ ಐಸ್​ಕ್ರೀಂ ಪಾರ್ಲರ್​ಗೆ ತೆರಳಿ ಗ್ರಾಹಕರಿಗೆ ಐಸ್​ಕ್ರೀಂ ವಿತರಿಸಿ ದಿಗ್ಗಜ ಶ್ರೀಮಂತರಾದ ಬಿಲ್​ ಗೇಟ್ಸ್ ಹಾಗೂ ವಾರನ್ ಬಫೆಟ್ ಮತ್ತೆ ಸುದ್ದಿಯಾಗಿದ್ದಾರೆ.

ಬಿಲ್​ ಗೇಟ್ಸ್

By

Published : Jun 11, 2019, 11:28 AM IST

ವಾಷಿಂಗ್ಟನ್​​:ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಬಿಲ್​ ಗೇಟ್ಸ್ ಹಾಗೂ ವಾರನ್ ಬಫೆಟ್ ಆಗಾಗ್ಗೆ ಎಲ್ಲರ ಜೊತೆಗೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

ಸದ್ಯ ಇಂತಹುದೇ 'ಸಿಂಪಲ್' ವಿಚಾರಕ್ಕೆ ದಿಗ್ಗಜ ಶ್ರೀಮಂತರಿಬ್ಬರು ಮತ್ತೆ ಸುದ್ದಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಡೈರಿ ಕ್ವೀನ್ ಎನ್ನುವ ಐಸ್​ಕ್ರೀಂ ಪಾರ್ಲರ್​ಗೆ ತೆರಳಿ ಗ್ರಾಹಕರಿಗೆ ಐಸ್​ಕ್ರೀಂ ವಿತರಿಸಿ ಖುಷಿಪಟ್ಟಿದ್ದಾರೆ.

ಗ್ರಾಹಕರ ಆರ್ಡರ್​​ಗೆ ತಕ್ಕಂತೆ ಈ ಇಬ್ಬರೂ ದಿಗ್ಗಜರು ವಿವಿಧ ತೆರನಾದ ಐಸ್​ಕ್ರೀಂ ಅನ್ನು ಸರ್ವ್ ಮಾಡಿದ್ದಾರೆ. ಗ್ರಾಹಕರೂ ಸಹ ದಿಗ್ಗಜರಿಂದ ಸರ್ವ್​ ಮಾಡಿಸಿಕೊಂಡು ಅಚ್ಚರಿಯ ಜೊತೆಗೆ ಖುಷಿಪಟ್ಟಿದ್ದಾರೆ.

ಐಸ್​ಕ್ರೀಂ ಪಾರ್ಲರ್​​ ವಿತರಣೆ ವಿಡಿಯೋವನ್ನು ಸ್ವತಃ ಬಿಲ್​ಗೇಟ್ಸ್​ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀಮಂತರ ಈ ಸಾಮಾನ್ಯ ನಡೆಯನ್ನು ಇಂಟರ್​ನೆಟ್ ಮಂದಿ ನೋಡಿ ಖುಷಿಪಟ್ಟಿದ್ದಾರೆ. ಜೊತೆಗೆ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ 1998ರಲ್ಲಿ ಡೈರಿ ಕ್ವೀನ್ ಐಸ್​ಕ್ರೀಂ ಪಾರ್ಲರ್​​ ವಾರನ್ ಬಫೆಟ್ ಒಡೆತನದಲ್ಲಿತ್ತು.

ABOUT THE AUTHOR

...view details