ಕರ್ನಾಟಕ

karnataka

ETV Bharat / briefs

ಗೋಧ್ರಾ ಸಂತ್ರಸ್ತೆಗೆ ₹ 50 ಲಕ್ಷ, ಕೆಲಸ, ಮನೆ ನೀಡಿ.. ಸುಪ್ರೀಂನಿಂದ ಗುಜರಾತ್‌ ಸರ್ಕಾರಕ್ಕೆ ಆದೇಶ! - BilkisBano Rs 50 Lakh Compensation

ಬಿಲ್ಕಿಸ್ ಬಾನುಗೆ ಸರ್ಕಾರಿ ನೌಕರಿ ಜತೆ ಸರ್ಕಾರವೇ ಆಕೆಯ ವಾಸಕ್ಕೆಂದು ವ್ಯವಸ್ಥೆ ಮಾಡ್ಬೇಕು ಅಂತಾ ಸುಪ್ರೀಂ ತನ್ನ ಆದೇಶದಲ್ಲಿ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ. ಗುಜರಾತ್ ಸರ್ಕಾರ ಈಗಾಗಲೇ ಗ್ಯಾಂಗ್‌ ರೇಪ್‌ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡೋದಕ್ಕೆ ಒಪ್ಪಿಕೊಂಡಿತ್ತು.

ಗೋಧ್ರಾ ಸಂತ್ರಸ್ತೆಗೆ ₹ 50 ಲಕ್ಷ

By

Published : Apr 23, 2019, 4:47 PM IST

ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡದಲ್ಲಿ ಗ್ಯಾಂಗ್‌ರೇಪ್‌ಗೊಳಗಾಗಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನುವಿಗೆ ₹ 50 ಲಕ್ಷ ಪರಿಹಾರ ಕೊಡಬೇಕೆಂದು ಗುಜರಾತ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶಿಸಿದೆ. 2 ವಾರದೊಳಗೆ ಈ ಸಂಪೂರ್ಣ ಪರಿಹಾರದ ಹಣವನ್ನ ಸಂತ್ರಸ್ತೆಗೆ ನೀಡಬೇಕೆಂದು ಕೋರ್ಟ್‌ ತನ್ನ ಆದೇಶದಲ್ಲಿ ಟೈಮ್‌ ನಿಗದಿಪಡಿಸಿದೆ.

ಬಿಲ್ಕಿಸ್ ಬಾನುಗೆ ಸರ್ಕಾರಿ ನೌಕರಿ ಜತೆ ಸರ್ಕಾರವೇ ಆಕೆಯ ವಾಸಕ್ಕೆಂದು ವ್ಯವಸ್ಥೆ ಮಾಡ್ಬೇಕು ಅಂತಾ ಸುಪ್ರೀಂ ತನ್ನ ಆದೇಶದಲ್ಲಿ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ. ಗುಜರಾತ್ ಸರ್ಕಾರ ಈಗಾಗಲೇ ಗ್ಯಾಂಗ್‌ ರೇಪ್‌ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡೋದಕ್ಕೆ ಒಪ್ಪಿಕೊಂಡಿತ್ತು.

ಮಾರ್ಚ್ 3, 2002ರಲ್ಲಿ ಗೋಧ್ರಾ ಹತ್ಯಾಕಾಂಡ ನಡೆದಿತ್ತು. ಈ ಗಲಭೆಯಲ್ಲಿ ಉದ್ರಿಕ್ತ ಗುಂಪು ಇಡೀ ರೈಲನ್ನ ಸುಟ್ಟು ಹಾಕಿತ್ತು. ಸಾವಿರಾರು ಜನರ ಹತ್ಯೆಗೀಡಾಗಿದ್ದರು. ರೈಲು ಸುಟ್ಟ ಬಳಿಕ ಉದ್ರಿಕ್ತರ ಗುಂಪು ಅದೇ ರೈಲಿನಲ್ಲಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಆಗ ಬಿಲ್ಕಿಸ್‌ ಬಾನು ಗರ್ಭಿಣಿಯಾಗಿದ್ದರು. ಅದೇ ಗಲಭೆಯಲ್ಲಿ 3 ವರ್ಷ ಹೆಣ್ಣು ಮಗು ಹಾಗೂ 14 ಕುಟುಂಬ ಸದಸ್ಯರನ್ನ ಬಿಲ್ಕಿಸ್ ಬಾನು ಕಳೆದುಕೊಂಡಿದ್ದರು. 2017ರಲ್ಲಿ ಅಹಮದಾಬಾದ್‌ ಹೈಕೋರ್ಟ್‌ ಸಾಕ್ಷ್ಯ ನಾಶಪಡಿಸಿರೋದು ಸಾಬೀತಾದ ಹಿನ್ನೆಲೆಯಲ್ಲಿ ಏಳು ನಾಗರಿಕರು, ಐವರು ಪೊಲೀಸರು ಮತ್ತು ಇಬ್ಬರು ವೈದ್ಯರಿಗೆ ಶಿಕ್ಷೆ ವಿಧಿಸಿತ್ತು. ಈಗ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೇಯೆ ನೇತೃತ್ವದ ಸಪ್ರೀಂಕೋರ್ಟ್‌ ಪೀಠ ಈ ಮಹತ್ವದ ಆದೇಶ ನೀಡಿದೆ.

For All Latest Updates

ABOUT THE AUTHOR

...view details