ಕರ್ನಾಟಕ

karnataka

ETV Bharat / briefs

ಕತ್ತೆಗೆ ಬೈಕ್ ಡಿಕ್ಕಿ : ಸವಾರ ಸೇರಿ ಯುವತಿಗೆ ಗಂಭೀರ ಗಾಯ - undefined

ರಸ್ತೆ ದಾಟುತ್ತಿದ್ದ ವೇಳೆ ಕತ್ತೆಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕತ್ತೆ ಸಾವನ್ನಪ್ಪಿದ್ದು, ಯುವಕ, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಬೈಕ್ ಅಪಘಾತ

By

Published : Apr 8, 2019, 11:17 PM IST

ಧಾರವಾಡ:ರಸ್ತೆ ದಾಟುತ್ತಿದ್ದ ಕತ್ತೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕತ್ತೆ ಸ್ಥಳದಲ್ಲಿ ಸಾವನಪ್ಪಿ, ಬೈಕ್​ನಲ್ಲಿದ್ದ ಯುವಕ, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಳ್ನಾವರ ರಸ್ತೆಯಲ್ಲಿ ನಡೆದಿದೆ.

ಅಳ್ನಾವರದಿಂದ ಧಾರವಾಡಕ್ಕೆ ಕೆಟಿಎಂ ಬೈಕ್​ನಲ್ಲಿ ಯುವಕ,ಯುವತಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಕತ್ತೆ ಅಡ್ಡ ಬಂದಿದೆ. ಬೈಕ್ ನಿಯಂತ್ರಣಕ್ಕೆ ಸಿಗದೆ ಸವಾರ ಕತ್ತೆಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗುತ್ತಿದೆ. ಪರಿಣಾಮ ಕತ್ತೆ ಸ್ಥಳದಲ್ಲೇ ಸಾವನ್ನಪ್ಪಿದೆ.

ಇನ್ನೂ ಬೈಕ್​ನಲ್ಲಿದ್ದ ಯುವಕ-ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ,ಯುವತಿಯ ಹೆಸರು,ಸ್ಥಳ ಮೊದಲಾದ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ.ಈಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details