ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಇಂದು ನಡೆದ ಬೆಸ್ಟ್ ಲುಕ್ ಕಂಟೆಸ್ಟೆಂಟ್ ಸ್ಪರ್ಧೆಯಲ್ಲಿ ವೈಷ್ಣವಿ ಗೌಡ ಹಾಗೂ ಅರವಿಂದ್ ಕೆ.ಪಿ. ಗೆದ್ದಿದ್ದಾರೆ.
ಕಳೆದ ವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಸುದೀಪ್ ಬೆಸ್ಟ್ ಡ್ರೆಸ್ ಬಗ್ಗೆ ಸ್ಪರ್ಧಿಗಳಿಗೆ ತಿಳಿಸಿದ್ದರು.ಅದರಂತೆ ಸ್ಪರ್ಧಿಗಳು ಈ ವಾರ ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದರು. ಎಲ್ಲಾ ಸ್ಪರ್ಧಿಗಳ ಫೋಟೋವನ್ನು ವಾಹಿನಿಯ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಕೂಡ ಮಾಡಲಾಗಿತ್ತು.
ಬೆಸ್ಟ್ ಲುಕ್ ಕಂಟೆಸ್ಟೆಂಟ್ಗಳಾದ ವೈಷ್ಣವಿ ಗೌಡ, ಅರವಿಂದ್ ಅತಿ ಹೆಚ್ಚು ಲೈಕ್ ಪಡೆದ ಸ್ಪರ್ಧಿಗಳು ವಿಜೇತರು ಎಂದು ಸುದೀಪ್ ಘೋಷಿಸಿದ್ದಾರೆ. ಅದರಂತೆ ಕಾರ್ಯಕ್ರಮದಲ್ಲಿ ಪಂಚಾಯಿತಿ ನಡೆದ ನಂತರ ಕೊನೆಯ ಹಂತದಲ್ಲಿ ಟಾಪ್ ಮೂರು ಸ್ಥಾನಗಳಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ ಹಾಗೂ ವೈಷ್ಣವಿ. ಜಂಟಲ್ಮನ್ ವಿಭಾಗದಲ್ಲಿ ಮಂಜು ಪಾವಗಡ, ಶಮಂತ್ ಗೌಡ ಹಾಗೂ ಅರವಿಂದ್ ಇದ್ದರು.
ಅಂತಿಮವಾಗಿ ಅತಿ ಹೆಚ್ಚು ಲೈಕ್ಸ್ ಗಳನ್ನು ಪಡೆದ ವೈಷ್ಣವಿ ಗೌಡ ಹಾಗೂ ಅರವಿಂದ್ ಬೆಸ್ಟ್ ಲುಕ್ ಕಂಟೆಸ್ಟೆಂಟ್ ಗಳಾಗಿ ಹೊರಹೊಮ್ಮಿದ್ದಾರೆ.