ಭೋಪಾಲ್:ಮಧ್ಯಪ್ರದೇಶ ಭೋಪಾಲ್ನಿಂದ ಈ ಸಲ ಬಿಜೆಪಿ ಅಭ್ಯರ್ಥಿಯಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್ ವಿರುದ್ಧ ಸೆಣಸಾಡಲು ಸಜ್ಜುಗೊಂಡಿದ್ದಾರೆ.
ಉಮಾ ಭಾರತಿ ತಬ್ಬಿಕೊಂಡು ಗಳಗಳನೇ ಕಣ್ಣೀರು ಹಾಕಿದ ಸಾಧ್ವಿ ಪ್ರಜ್ಞಾ ಸಿಂಗ್! - ಭೋಪಾಲ್
ಇಷ್ಟು ದಿನ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಮಾ ಭಾರತಿ ಕಣಕ್ಕಿಳಿಯುತ್ತಿದ್ದರು. ಆದರೆ, ಈ ಸಲ ಅವರ ಜಾಗಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ಗೆ ಟಿಕೆಟ್ ನೀಡಲಾಗಿದೆ.
ಹಿಂದೆ ಈ ಕ್ಷೇತ್ರದಿಂದ ಕೇಂದ್ರ ಸಚಿವೆ ಉಮಾ ಭಾರತಿ ಕಣಕ್ಕಿಳಿಯುತ್ತಿದ್ದರು. ಆದರೆ, ಅವರು ಈ ಸಲ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲವಾದ್ದರಿಂದ ಸಾಧ್ವಿ ಪ್ರಜ್ಞಾ ಸಿಂಗ್ಗೆ ಬಿಜೆಪಿ ಮಣೆ ಹಾಕಿದೆ. ಭೋಪಾಲ್ ಕ್ಷೇತ್ರದಿಂದ ತಾವು ಕಣಕ್ಕಿಳಿಯುತ್ತಿಲ್ಲ ಎಂದು ಉಮಾ ಭಾರತಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಬಿಜೆಪಿ ಭೋಪಾಲದಿಂದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಪಕ್ಷ ಕಣಕ್ಕಿಳಿಸಿತ್ತು. ಇನ್ನು ಪಕ್ಷದ ನಿರ್ಧಾರದಿಂದ ಉಮಾ ಭಾರತಿ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಜತೆಗೆ ಇಷ್ಟು ದಿನ ಅವರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇಂದು ಖುದ್ದಾಗಿ ಪ್ರಜ್ಞಾ ಸಿಂಗ್ ಉಮಾ ಭಾರತಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಈ ವೇಳೆ ಸಾಧ್ವಿ ಮನೆಯಿಂದ ತೆರಳಲು ಮುಂದಾದಾಗ ಅವರ ಕಾರಿನ ಹತ್ತಿರ ಬಂದು ಉಮಾ ಭಾರತಿ ಸಾಧ್ವಿ ಅವರನ್ನ ತಬ್ಬಿಕೊಂಡಿದ್ದಾರೆ. ಈ ವೇಳೆ ಸಾಧ್ವಿ ಕಣ್ಣೀರು ಹಾಕಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಸಾಧ್ವಿ ಕಣ್ಣೀರು ಹಾಕುತ್ತಿದ್ದಂತೆ ಅವರನ್ನ ಉಮಾ ಭಾರತಿ ಸಂತೈಸಿದ್ದು ವಿಶೇಷವಾಗಿತ್ತು.