ಬಳ್ಳಾರಿ:ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಂದಾಜು 12 ಸಾವಿರ ಕೋವಿಡ್ ಲಸಿಕೆ ಲಭ್ಯತೆಯಿದೆ. ಮುಂದಿನ ಮೂರ್ನಾಲ್ಕು ದಿನಗಳವರೆಗೆ ಈ ಕೋವಿಡ್ ಲಸಿಕೆಯನ್ನ ಹಾಕಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಯಾರಿ ನಡೆಸಿಕೊಂಡಿದೆ.
ಗಣಿ ಜಿಲ್ಲೆ ಬಳ್ಳಾರಿಯಲ್ಲಿ 12 ಸಾವಿರ ಲಸಿಕೆ ಲಭ್ಯತೆ - ಬಳ್ಳಾರಿಯಲ್ಲಿ 12 ಸಾವಿರ ಲಸಿಕೆ ಲಭ್ಯತೆ
ಬಳ್ಳಾರಿ ಮಹಾನಗರ ಹಾಗೂ ನಗರ ಪಟ್ಟಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿರುವ ಕೋವಿಡ್ ಲಸಿಕಾ ವಿತರಣಾ ಕೇಂದ್ರದಲ್ಲಿ ಈ ಕೋವಿಶೀಲ್ಡ್ ಲಸಿಕೆಯನ್ನ ಹಾಕಲಾಗುತ್ತೆ.

ಕೇವಲ ಬಳ್ಳಾರಿ ಮಹಾನಗರ ಹಾಗೂ ನಗರ ಪಟ್ಟಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿರುವ ಕೋವಿಡ್ ಲಸಿಕಾ ವಿತರಣಾ ಕೇಂದ್ರದಲ್ಲಿ ಈ ಕೋವಿಶೀಲ್ಡ್ ಲಸಿಕೆಯನ್ನ ಹಾಕಲಾಗುತ್ತೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆಯನ್ನ ಹಾಕಲಾಗುತ್ತಿಲ್ಲ. ಕೇವಲ ಬಳ್ಳಾರಿ ಮಹಾನಗರ ಸೇರಿದಂತೆ ನಗರ - ಪಟ್ಟಣಗಳಿಗೆ ಮಾತ್ರ ಕೋವಿಶೀಲ್ಡ್ ಲಸಿಕೆಯನ್ನ ಹಾಕಲಾಗುತ್ತದೆಯಷ್ಟೇ.
ಈ ಕುರಿತು ಈಟಿವಿ ಭಾರತ್ಗೆ ಮಾಹಿತಿ ನೀಡಿರುವ ಸರ್ವಲೆನ್ಸ್ ಅಧಿಕಾರಿ (ಆರ್ಸಿಹೆಚ್) ಡಾ. ಅನಿಲ್ ಕುಮಾರ್, ಈವರೆಗೆ ಅಂದಾಜು 12 ಸಾವಿರದಷ್ಟು ಕೋವಿಶೀಲ್ಡ್ ಲಸಿಕೆಯ ಸಂಗ್ರಹವಿದೆ. ಮುಂದಿನ ಮೂರು ದಿನಗಳ ಅವಧಿಗೆ ಈ ಕೋವಿಶೀಲ್ಡ್ ಲಸಿಕೆಯನ್ನ ಹಾಕಲಾಗುವುದು. ನಮ್ಮಲ್ಲಿ ಕೋವಿಡ್ ಕೊರತೆ ಏನಿಲ್ಲ. ಕೋವ್ಯಾಕ್ಸಿನ್ ಲಸಿಕೆಯ ಕೊರತೆಯಂತೂ ಮೊದಲಿಂದಲೂ ಇದೆ ಎಂದಿದ್ದಾರೆ.