ಕೊಯಿಲ(ದ.ಕ):ಕಾನೂನು ಪಾಲನೆಯ ಜತೆಗೆ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ನೆರವಿನೊಂದಿಗೆ ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮತ್ತು ಕೊಯಿಲ ಬೀಟ್ ಪೊಲೀಸ್ ಹರೀಶ್ ಎಂಬುವರು ಕೈ ಜೋಡಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೊಯಿಲ ಗ್ರಾಮದ ಬರೆಮೇಲು ವಳಕಡಮ ರಸ್ತೆ ಹಾಗೂ ವಳಕಡಮ ಹಿರಿಯ ಪ್ರಾಥಮಿಕ ಶಾಲೆ, ಹಾಲಿನ ಸೊಸೈಟಿ ರಸ್ತೆಯ ಬೀಜತ್ತಳಿಕೆ ಹಾಗೂ ಕೆರೆಕೋಡಿ ಎಂಬಲ್ಲಿ ರಸ್ತೆ ಹದಗೆಟ್ಟು ಸಂಚಾರಕ್ಕೆ ಅನಾನುಕೂಲವಾಗಿದೆ. ಈ ಕುರಿತು ಕೊನೆಮಜಲು-ವಳಕಡಮ ವ್ಯಾಪ್ತಿಯ ಗಾಮಸ್ಥರ ನೆರವಿನಿಂದ ಶ್ರಮದಾನದ ಮೂಲಕ ರಸ್ತೆಯ ಕೆಸರು ತೆಗೆದು ಚರಳು ಮಿಶ್ರಿತ ಮರಳು ಹಾಕಿ ದುರಸ್ತಿಗೊಳಿಸಲಾಯಿತು.