ನವದೆಹಲಿ: ಪ್ರಧಾನಿ ಹುದ್ದೆಯನ್ನು ಐದು ವರ್ಷ ಯಶಸ್ವಿಯಾಗಿ ನಿಭಾಯಿಸಿದ್ದ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಯಲ್ಲಿ ಮತ್ತಷ್ಟು ಪರಿಣಾಮಕಾರಿ ಹಾಗೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸಮಯ ಪಾಲನೆಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು ಎಂದು ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಪ್ರತಿಯೊಬ್ಬ ಸಚಿವನೂ ಸಮಯ ಪಾಲನೆಯಲ್ಲಿ ಯಾವುದೇ ರಾಜಿಯಾಗಬಾರದು. ಮನೆಯಿಂದ ಕೆಲಸ ನಿರ್ವಹಿಸುವಂತಿಲ್ಲ. ಇದು ಬೇರೆ ಸಹೋದ್ಯೋಗಿಗಳಿಗೆ ಕೆಟ್ಟ ಉದಾಹರಣೆಯಾಗುವ ಸಾಧ್ಯತೆ ಇದೆ ಎಂದು ಮೋದಿ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.