ನವದೆಹಲಿ:ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ತರಂಗದಿಂದ ಉಂಟಾದ ಹಾನಿಯನ್ನು ದೇಶವು ಇನ್ನೂ ಎದುರಿಸುತ್ತಿದೆ. ಈ ನಡುವೆ ಮ್ಯೂಕಾರ್ಮೈಕೋಸಿಸ್(ಬ್ಲಾಕ್ ಫಂಗಸ್) ಎಂಬ ಮತ್ತೊಂದು ಕಾಯಿಲೆ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಎಚ್ಚರಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮ್ಯೂಕೋಮೈಕೋಸಿಸ್ ವಿಷಯದ ಬಗ್ಗೆ ಎಚ್ಚರದಿಂದಿದ್ದು, ಜಾಗರೂಕರಾಗಿರುವಂತೆ ಕೇಳಿಕೊಂಡಿದೆ.
ಪ್ರಸ್ತುತ ಮ್ಯೂಕೋರ್ಮೈಕೋಸಿಸ್ ಸೋಂಕಿನ ಸಂಖ್ಯೆ ತೀರಾ ಕಡಿಮೆ ಇದ್ದರೂ, ಈ ಗಂಭೀರ ಶಿಲೀಂಧ್ರಗಳ ಸೋಂಕು ಮತ್ತು ಲೀಶ್ಮೇನಿಯಾಸಿಸ್ಗೆ ಬಳಸುವ ಆಂಟಿಫಂಗಲ್ಗೆ ಔಷಧಿಯಾದ ಆಂಫೊಟೆರಿಸಿನ್ ಬಿ ಉತ್ಪಾದನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ.ಪಾಲ್ ಹೇಳಿದರು.