ಕರ್ನಾಟಕ

karnataka

ETV Bharat / briefs

ಐಪಿಎಲ್‌ ಫೈನಲ್‌ ಪಂದ್ಯ.. ಚೆನ್ನೈನಿಂದ ಹೈದರಾಬಾದ್​ಗೆ​ ಶಿಫ್ಟಾಗಲು ಕಾರಣ ಇಷ್ಟೇ..! - Chennai

ಲೀಗ್​ನ ಎಲ್ಲ ಪಂದ್ಯಗಳನ್ನೂ ಆಡಲು ಅನುಮತಿ ನೀಡಿದ್ದ ಬಿಸಿಸಿಐ ಫೈನಲ್​ ಪಂದ್ಯವನ್ನು ಮಾತ್ರ ಏಕೆ ಶಿಫ್ಟ್​ ಮಾಡಿತ್ತೆಂದರೆ, ಲೀಗ್​ನ 7 ಪಂದ್ಯಗಳ ಟಿಕೆಟ್​ನಿಂದ ಬರುವ ಹಣ ತವರಿನ ಪ್ರಾಂಚೈಸಿಗಳಿಗೆ ಹೋಗುತ್ತದೆ. ಆದರೆ, ಪ್ಲೇಆಫ್​ ಪಂದ್ಯಗಳಿಂದ ಬರುವ ಟಿಕೆಟ್​ ಹಣ ಮಾತ್ರ ಬಿಸಿಸಿಐಗೆ ಸೇರುವುದರಿಂದ ಫೈನಲ್​ ಪಂದ್ಯವನ್ನು ಹೈದರಾಬಾದ್​ಗೆ ಶಿಫ್ಟ್​ ಮಾಡಿದೆ.

bcci

By

Published : Apr 30, 2019, 5:16 PM IST

Updated : Apr 30, 2019, 5:50 PM IST

ಮುಂಬೈ: ಕಳೆದ ಬಾರಿಯ ಚಾಂಪಿಯನ್​ ಸಿಎಸ್​ಕೆ ತವರಿನಲ್ಲಿ ನಡೆಯಬೇಕಿದ್ದ ಫೈನಲ್​ ಪಂದ್ಯವನ್ನು ಹೈದರಾಬಾದ್​ಗೆ ಶಿಫ್ಟ್​ ಮಾಡಿತ್ತು. ಆದರೆ, ಅದರ ಹಿಂದೆ ಬಿಸಿಸಿಐ ಲಾಭದ ಲೆಕ್ಕಚಾರ ಅಡಗಿದೆ ಎನ್ನುವುದು ಇದೀಗ ಬೆಳೆಕಿಗೆ ಬಂದಿದೆ.

ಕಳೆದ ವಾರವಷ್ಟೇ ಬಿಸಿಸಿಐ ತಮಿಳುನಾಡು ಕ್ರಿಕೆಟ್​ ಮಂಡಳಿಯಿಂದ ಚಿದಂಬರಂ ಸ್ಟೇಡಿಯಂನಲ್ಲಿ I, J, K ಸ್ಟ್ಯಾಂಡ್​ಗಳಿಗೆ ಅನುಮತಿ ಪಡೆಯಲು ವಿಫಲವಾದ್ದರಿಂದ ಬಿಸಿಸಿಐ ಫೈನಲ್​ ಪಂದ್ಯವನ್ನು ಹೈದರಾಬಾದ್​ಗೆ ಶಿಫ್ಟ್​ ಮಾಡಿತ್ತು.

ಲೀಗ್​ನಲ್ಲಿ ಎಲ್ಲಾ ಪಂದ್ಯಗಳನ್ನೂ ಆಡಲು ಅನುಮತಿ ನೀಡಿದ್ದ ಬಿಸಿಸಿಐ ಫೈನಲ್​ ಪಂದ್ಯವನ್ನು ಮಾತ್ರ ಏಕೆ ಶಿಫ್ಟ್​ ಮಾಡಿತ್ತೆಂದರೆ, ಲೀಗ್‌ನ 7 ಪಂದ್ಯಗಳ ಟಿಕೆಟ್​ನಿಂದ ಬರುವ ಹಣ ತವರಿನ ಫ್ರಾಂಚೈಸಿಗಳಿಗೆ ಹೋಗುತ್ತದೆ. ಆದರೆ, ಪ್ಲೇಆಫ್​ ಪಂದ್ಯಗಳಿಂದ ಬರುವ ಟಿಕೆಟ್​ ಹಣ ಮಾತ್ರ ಬಿಸಿಸಿಐಗೆ ಸೇರುವುದರಿಂದ ಫೈನಲ್​ ಪಂದ್ಯವನ್ನು ಹೈದರಾಬಾದ್​ಗೆ ಶಿಫ್ಟ್​ ಮಾಡಿದೆ.

ಚಿದಂಬರಂ ಸ್ಟೇಡಿಯಂ ನಿಷೇಧಿತ ಮೂರು ಸ್ಟ್ಯಾಂಡ್​ಗಳು ಸುಮಾರು 12000 ಸೀಟ್​ಗಳನ್ನು ಹೊಂದಿದ್ದು, ಇಲ್ಲಿ ಫೈನಲ್​ ನಡೆದರೆ 12000 ಟಿಕೆಟ್​ನಿಂದ ಬರುವ ಲಕ್ಷಾಂತರ ಆದಾಯ ಕೈತಪ್ಪುತ್ತದೆ ಎಂಬ ಕಾರಣದಿಂದ ಬಿಸಿಸಿಐ ಪೈನಲ್​ ಪಂದ್ಯವನ್ನು ಹೈದರಾಬಾದ್​ಗೆ ಶಿಫ್ಟ್​ ಮಾಡಿದೆ. ಆದರೆ, ಮೊದಲ ಕ್ವಾಲಿಫೈಯರ್​​​ ಪಂದ್ಯ ಚೆನ್ನೈನಲ್ಲೇ ನಡೆಯಲಿದೆ.

ಬಿಸಿಸಿಐ ಪ್ಲೇಆಫ್​ನ 4 ಪಂದ್ಯಗಳಿಂದ ಸುಮಾರು 20 ಕೋಟಿ ಆದಾಯ ನಿರೀಕ್ಷಿಸುತ್ತಿದೆ. ಕಳೆದ ಬಾರಿ 18 ಕೋಟಿ ಆದಾಯ ಗಳಿಸಿತ್ತು.

Last Updated : Apr 30, 2019, 5:50 PM IST

ABOUT THE AUTHOR

...view details