ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮೆಟ್ರೋ ಮಾರ್ಗಗಳ ಪಿಲ್ಲರ್ಗಳು ಬಿರುಕು ಬಿಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪಿಲ್ಲರ್ಗಳನ್ನು ತ್ವರಿತವಾಗಿ ತಪಾಸಣೆ ನಡೆಸುವಂತೆ ಮೇಯರ್ ಗಂಗಾಂಬಿಕೆ ಬಿಎಂಆರ್ಸಿಎಲ್ಗೆ ಪತ್ರ ಬರೆದಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮೆಟ್ರೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋದಲ್ಲಿ ಲಕ್ಷಾಂತರ ಮಂದಿ ಪ್ರಾಯಾಣಿಸುತ್ತಾರೆ. ಆದರೆ, ಮೆಟ್ರೋ ನಿಗಮ ಮಾತ್ರ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿಲ್ಲ.
ಮೆಟ್ರೋ ನಿಗಮಕ್ಕೆ ಮೇಯರ್ ಬರೆದ ಪತ್ರ ಪಿಲ್ಲರ್ಗಳ ಬಿರುಕು ಸುದ್ದಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ. ಈ ಹಿಂದೆ ಪಿಂಕ್ ಲೈನ್ ಟ್ರಿನಿಟಿ ವೃತ್ತದ ಬಳಿ ಬಿರುಕು ಕಾಣಿಸಿಕೊಂಡು ನಗರದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೆ ಗ್ರೀನ್ ಲೈನ್ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯ ಎರಡು ಮೆಟ್ರೋ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಪದೇ ಪದೇ ಈ ರೀತಿಯ ಘಟನೆಗಳು ನಡೆದರೆ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡುತ್ತದೆ.
ನಿಗಮವು ಈ ಬಗ್ಗೆ ಎಚ್ಚರ ವಹಿಸಬೇಕು.ಮೆಟ್ರೋ ನಿಗಮವು ಬೇಜವಾಬ್ದಾರಿತನ ತೋರದೆ ತಕ್ಷಣ ನುರಿತ ತಜ್ಞರನ್ನು ನಿಯೋಜನೆ ಮಾಡಿ, ಎಲ್ಲ ಪಿಲ್ಲರ್ಗಳ ತಪಾಸಣೆ ನಡೆಸಿ ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಮೆಟ್ರೋ ನಿಲ್ದಾಣಗಳ ಕಟ್ಟಡದಲ್ಲಿ ಎಲ್ಲಾದರು ಬಿರುಕು ಬಿಟ್ಟಿದೆಯೇ ಎಂಬುದನ್ನು ಪರಿಶೀಲಿಸಿ ಸರಿಪಡಿಸಲು ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.