ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 34,68,463 ಜನರಿಗೆ ಲಸಿಕೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 5 ತಿಂಗಳ ಅವಧಿಯಲ್ಲಿ 33,074 ಸೆಷನ್‌ಗಳನ್ನು ಮಾಡಿ ಲಸಿಕೆ ಕೊಡಲಾಗಿದೆ. ಮೊದಲ ಡೋಸ್ ಪಡೆದವರ ಸಂಖ್ಯೆ 28,54,671 ಆಗಿದ್ದು, ಎರಡನೇಯ ಡೋಸ್ ಅನ್ನು 6,13,792 ಜನರಿಗೆ ನೀಡಲಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಸಿಕೆ ಪಡೆದಿರುವ ಫಲಾನುಭವಿಗಳ ಮಾಹಿತಿ :
ಲಸಿಕೆ ಪಡೆದವರಲ್ಲಿ 19,347 ಆರೋಗ್ಯ ಕಾರ್ಯಕರ್ತರು, 1,63,616 ಮುಂಚೂಣಿ ಕಾರ್ಯಕರ್ತರು, 9,03,765 18-44 ವರ್ಷದವರು, 15,43,617 45+ವರ್ಷ ಮೇಲ್ಪಟ್ಟವರು , 6,75,775- 60+ ಮೇಲ್ಪಟ್ಟವರಾಗಿದ್ದಾರೆ.
ಕಳೆದ ಒಂದು ವಾರದಲ್ಲಿ ನೀಡಲಾದ ಲಸಿಕೆ ಮಾಹಿತಿಯನ್ನು ಪಾಲಿಕೆ ಪ್ರಕಟ ಮಾಡಿದ್ದು, 4,15,282 ಮಂದಿ ಖಾಸಗಿ ಮತ್ತು 1,67,161 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದಿದ್ದಾರೆ.ಪಾಲಿಕೆ ವ್ಯಾಪ್ತಿಯಲ್ಲಿ ಕೋವ್ಯಾಕ್ಸಿನ್ 53,400 ಡೋಸ್, ಕೋವಿಶೀಲ್ಡ್ 18 ರಿಂದ 44 ವರ್ಷದವರಿಗೆ 25,140 ಮತ್ತು ಕೋವಿಶೀಲ್ಡ್ 45 + ಜನರಿಗೆ 45,860 ಡೋಸ್ ಈಗ ಲಭ್ಯವಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಪತ್ತೆಗೆ ಮನೆ -ಮನೆ ಸಮೀಕ್ಷೆ ಬಿಬಿಎಂಪಿ ಕೈಗೊಂಡಿರುವ ಕ್ರಮಗಳು :
ಲಸಿಕೆ ಹಾಕಿಸಿಕೊಳ್ಳದೇ ಇರುವ ಫಲಾನುಭವಿಗಳನ್ನು ಕಂಡುಹಿಡಿಯಲು ಮನೆ-ಮನೆಗೆ ಸಮೀಕ್ಷೆ ಮಾಡುವ ಕಾರ್ಯ ಆರಂಭ ಮಾಡಲಾಗಿದೆ. ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯದವರನ್ನು 1912 ರಿಂದ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಕೇಳಿಕೊಳ್ಳಲಾಗುತ್ತಿದೆ. ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ವ್ಯಾಕ್ಸಿನೇಶನ್ಗೆ ಎಸಿಟಿ ಮತ್ತು ಇತರ ಸ್ಥಳೀಯ ಎನ್‌ಜಿಒಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.