ಕರ್ನಾಟಕ

karnataka

ETV Bharat / briefs

ಬಿಬಿಎಂಪಿಯಲ್ಲಿ ಕೋಲಾಹಲ ಎಬ್ಬಿಸಿದ ಸೀರೆ, ಲಿಪ್​ಸ್ಟಿಕ್​ ಕಮೆಂಟ್​: ಕಾರ್ಪೊರೇಟರ್ಸ್​ ಮಧ್ಯೆ ವಾಕ್ಸಮರ!

ಪಾಲಿಕೆಯ ಕೌನ್ಸಿಲ್​ ಸಭೆಯಲ್ಲಿ ಇಬ್ಬರು ಕಾರ್ಪೋರೇಟರ್​ಗಳ ನಡುವೆ ಆರೋಪ-ಪ್ರತ್ಯಾರೋಪ ನಡೆದಿದೆ. ಮಹಿಳೆಯರ ಅಸಭ್ಯವಾಗಿ ಮಾತನಾಡಲಾಗುತ್ತಿದೆ ಎಂದು ಕಾರ್ಪೊರೇಟರ್​ ಮಮತಾ ವಾಸುದೇವ್ ಆರೋಪಿಸಿದ್ದಾರೆ. ಇದನ್ನು ತಳ್ಳಿಹಾಕಿರುವ ಕಾರ್ಪೊರೇಟರ್​ ವೆಂಕಟೇಶ್​ ಅವರು ಮಮತಾ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ.

ಆರೋಪ, ಪ್ರತ್ಯಾರೋಪ ಮಾಡಿದ ಪಾಲಿಕೆ ಸದಸ್ಯರು

By

Published : May 30, 2019, 7:52 PM IST

ಬೆಂಗಳೂರು: ಪಾಲಿಕೆ ಕೌನ್ಸಿಲ್ ಸಭೆ ಇಂದು ಆರೋಪ, ಪ್ರತ್ಯಾರೋಪಗಳಿಂದಲೇ ಆರಂಭವಾಗಿ ಕೊನೆಗೆ ಅದರಲ್ಲೇ ಮುಕ್ತಾಯವಾಗಿದೆ.

ಹೆಣ್ಣುಮಕ್ಕಳ ಸೀರೆ, ಲಿಪ್​ಸ್ಟಿಕ್​, ಒಡವೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗ್ತಿದೆ, ಕಣ್ಸನ್ನೆ ಮಾಡ್ತಾರೆ. ಬಾಯಲ್ಲಿ ಸಹೋದರಿ ಅಂದ್ರೂ ರೌಡಿಗಳನ್ನು ಬಿಟ್ಟು ತುಂಬಾ ನೋವು ಕೊಡುತ್ತಾರೆ ಎಂದು ಯಶವಂತಪುರ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ವಿರುದ್ಧ ಜೆ.ಪಿ ಪಾರ್ಕ್ ಕಾರ್ಪೊರೇಟರ್ ಮಮತಾ ವಾಸುದೇವ್ ಆರೋಪಿಸಿದ್ದಾರೆ.

ಆರೋಪ, ಪ್ರತ್ಯಾರೋಪ ಮಾಡಿದ ಪಾಲಿಕೆ ಸದಸ್ಯರು

ಯಶವಂತಪುರ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಹಾಗೂ ಜೆ.ಪಿ. ಪಾರ್ಕ್ ಕಾರ್ಪೊರೇಟರ್ ಮಮತಾ ವಾಸುದೇವ್ ನಡುವಿನ ಹಳೇ ದ್ವೇಷ ಪುನಃ ಮುಂದುವರೆದಿದೆ. ಕೌನ್ಸಿಲ್ ಸಭೆಯನ್ನು ಮುಂದೂಡಿದ ಸಮಯದಲ್ಲಿ ಮಮತಾ ವಾಸುದೇವ್ ಅವರು, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಎಳೆದುಕೊಂಡು ಬಂದು ಹೊಡಿಯೋಣ ಎಂದು ಹೇಳಿದರು ಅಂತಾ ಮಮತಾ ವಿರುದ್ಧ ವೆಂಕಟೇಶ್ ಆರೋಪಿಸಿದ್ದಾರೆ.

ಇಂತಹ ಪದ ಬಳಕೆ ಏಕೆ ಮಾಡಿದಿರಿ ಎಂದು ಮಮತಾರನ್ನ ಕೇಳಿದ್ದಕ್ಕೆ, ಜಿ.ಕೆ. ವೆಂಕಟೇಶ್ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡ್ತಾರೆ. ಸೀರೆ, ಒಡವೆ, ಲಿಪ್​ಸ್ಟಿಕ್ ಬಗ್ಗೆ ಕಮೆಂಟ್ ಮಾಡ್ತಾರೆ. ಬಾಯಲ್ಲಿ ಸಹೋದರಿ ಅನ್ನುತ್ತಾರೆ. ಆದರೆ ಹೆಣ್ಣುಮಕ್ಕಳಿಗೆ ಗೌರವ ಕೊಡುವುದು ಗೊತ್ತಿಲ್ಲ. ಕೌನ್ಸಿಲ್​ ಸಭೆಗೆ ಹೆಣ್ಣುಮಕ್ಕಳನ್ನ ನೋಡೋಕೆ ಬರ್ತಾರಾ? ಎಂದು ಪ್ರಶ್ನಿಸಿದರು.

ನನ್ನ ಮಾನಕ್ಕಿಂತ ನನ್ನ ಪಕ್ಷದ ನಾಯಕರ ಮಾನ ಮುಖ್ಯ. ಹೀಗಾಗಿ ಪ್ರಧಾನಿ ಮೋದಿ ಕುರಿತು ಏಕವಚನದಲ್ಲಿ ಆರೋಪ ಮಾಡಿದ್ದನ್ನು ಸಹಿಸದೆ ನಾನು ತಾಳ್ಮೆ ಮೀರಿ ಮಾತನಾಡಬೇಕಾಯಿತು ಎಂದು ಮಮತಾ ವಾಸುದೇವ್ ಸ್ಪಷ್ಟನೆ ನೀಡಿದ್ದಾರೆ.

ಕೌನ್ಸಿಲ್ ಸಭೆಯ ಚರ್ಚೆ ವೇಳೆ ಯಲಚೇನಹಳ್ಳಿ ಕಾರ್ಪೊರೇಟರ್ ಬಾಲಕೃಷ್ಣ ಅವರು ವಾರ್ಡ್​ನಲ್ಲಿನ ಕಸದ ಸಮಸ್ಯೆ ಬಗೆಹರಿಯುತ್ತಿಲ್ಲ. ಮೇಯರ್, ಆಯುಕ್ತರು ಆದೇಶ ಮಾಡಿದರೂ ಕಸ ಸಮಸ್ಯೆ ಹಾಗೇ ಇದೆ ಎಂದು ಹೇಳಿದಾಗ ಜಿ.ಕೆ. ವೆಂಕಟೇಶ್ ಮಧ್ಯಪ್ರವೇಶಿಸಿ ಮೋದಿ ಅವರ ಬಳಿ ಫಂಡ್ ಕೇಳಿ ಎಂದು ವ್ಯಂಗ್ಯವಾಡಿದರು. ಇದು ಬಿಜೆಪಿ ಕಾರ್ಪೊರೇಟರ್ಸ್​ ರೊಚ್ಚಿಗೇಳಲು ಕಾರಣವಾಯ್ತು. ಜಿ.ಕೆ. ವೆಂಕಟೇಶ್ ಕ್ಷಮೆ ಕೇಳುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು.

ಈ ವೇಳೆ ಮೇಯರ್ ಸಭೆ ಮುಂದೂಡಿದರು. ಇದೇ ಸಮಯದಲ್ಲಿ ವೈಯಕ್ತಿಕ ದ್ವೇಷ ಹೊಂದಿರುವ ಇಬ್ಬರು ಕಾರ್ಪೊರೇಟರ್ಸ್​ ಮಧ್ಯೆ ವಾಕ್ಸಮರ ನಡೆದಿದೆ. ಮಮತಾ ವಾಸುದೇವ್ ಅವರು, ಜಿ.ಕೆ. ವೆಂಕಟೇಶ್ ಅವರಿಗೆ ಅವಾಚ್ಯ ಪದಬಳಕೆ ಮಾಡಿದರು. ಬಳಿಕ ಪ್ರತಿಕ್ರಿಯಿಸಿದ ಮಮತಾ ವಾಸುದೇವ್, ನನ್ನ ವಾರ್ಡ್ ಸಮಸ್ಯೆ ಹೇಳಬಾರದು ಎಂಬ ಕಾರಣಕ್ಕೆ ವಿಷಯ ಬದಲಾಯಿಸಿದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್​ ಅವರು, ಮಮತಾ ವಾಸುದೇವ್ ಅವಾಚ್ಯ ಪದ ಬಳಕೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಒಂದು ವರ್ಷ ಪಾಲಿಕೆ ಸದಸ್ಯ ಸ್ಥಾನದಿಂದ ಅಮಾನತಿಗೆ ಆಗ್ರಹಿಸುತ್ತೇನೆ. ಈ ಪದಗಳನ್ನು ಅವರಿಗೆ ಯಾವ ಯುನಿವರ್ಸಿಟಿ ಕಲಿಸಿದೆಯೋ ಗೊತ್ತಿಲ್ಲ. ನನಗೂ ಮಗಳಿದ್ದಾಳೆ, ನಾನು ಆರೀತಿ ಕಮೆಂಟ್ ಮಾಡಿಲ್ಲ. ಇದು ಮಮತಾ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಗರಂ ಆದರು.

ಒಟ್ಟಾರೆ ಈ ಇಬ್ಬರು ಕಾಪೊರ್ರೇಟರ್ಸ್​ ಮಧ್ಯೆದ ಆರೋಪ-ಪ್ರತ್ಯಾರೋಪಗಳು ಏನೇ ಇದ್ದರೂ ಮೇಯರ್​ ಗಂಗಾಂಬಿಕೆಯವರೇ ಬಗೆಹರಿಸುತ್ತಾರಾ ಅಥವಾ ಇದು ಇನ್ನೊಂದು ರೂಪ ಪಡೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details