ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್ ಗಳಿಗೆ ನಡೆದ ಉಪಚುನಾವಣೆ ಮುಕ್ತಾಯಗೊಂಡಿದೆ. ಸಗಾಯಪುರಂ, ಕಾವೇರಿಪುರ ವಾರ್ಡ್ಗಳಲ್ಲಿ ಬೆಳಗ್ಗೆ ಏಳು ಗಂಟೆಗೆ ಆರಂಭವಾಗಿತ್ತು. ಸಗಾಯಪುರಂನಲ್ಲಿ ಶಾಂತಿಯುತವಾಗಿ ಮತದಾನ ನಡೆದರೆ, ಕಾವೇರಿಪುರದಲ್ಲಿ ಮೈತ್ರಿ ಪಕ್ಷ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಮೇ 31ರಂದು ಇಂದು ನಡೆದ ಮತದಾನದ ಫಲಿತಾಂಶ ಹೊರ ಬೀಳಲಿದೆ.
ಪಾಲಿಕೆ ಸದಸ್ಯ ಏಳುಮಲೈ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆ ಇದಾಗಿದ್ದು, ಮೈತ್ರಿ ಅಭ್ಯರ್ಥಿ ಪಳನಿಯಮ್ಮಾಳ್ ಹಾಗೂ ಸ್ವತಂತ್ರ ಅಭ್ಯರ್ಥಿ ಮಾರಿಮುತ್ತು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಪಚುನಾವಣೆಯಲ್ಲಿ ಶೇಕಡಾ 44.71 ರಷ್ಟು ಮತದಾನವಾಗಿದೆ.
ಕಾವೇರಿಪುರ ವಾರ್ಡ್ ಉಪಚುನಾವಣೆ: ಇನ್ನು ಕಾವೇರಿಪುರ ವಾರ್ಡ್ನಲ್ಲಿ ಕಾರ್ಯಕರ್ತರು ದೊಣ್ಣೆ ಹಿಡಿದು ರಸ್ತೆಯಲ್ಲೇ ಬಡೆದಾಡಿಕೊಂಡರು. ಬಿಜೆಪಿ ಹಾಗೂ ಮೈತ್ರಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸೋ ಹಂತಕ್ಕೂ ತಲುಪಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎರಡು ಪಕ್ಷದವರೂ ಕೂಡ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರೆ.
ಕಾವೇರಿಪುರದಲ್ಲಿ ನಡೆದಂತಹ ಉಪಚುನಾವಣೆಯಲ್ಲಿ ಕಾವೇರಿಪುರದಲ್ಲಿ ಶೇಕಡ 39. 54 ರಷ್ಟು ಮತದಾನವಾಗಿದ್ದು, ರಜೆ ಇರದ ಕಾರಣ ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.