ಬೆಂಗಳೂರು: ಬಸವ ಸಮಿತಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರಿಗೆ 'ಕಾಯಕ ರತ್ನ', 'ದಾಸೋಹ ರತ್ನ' ಹಾಗೂ 'ಬಸವ ವಿಭೂಷಣ' ಪ್ರಶಸ್ತಿ ವಿತರಿಸಲಾಯಿತು.
ಬಸವ ಜಯಂತಿ: ಸಾಧಕರಿಗೆ 'ಕಾಯಕ ರತ್ನ', 'ದಾಸೋಹ ರತ್ನ' ಪ್ರಶಸ್ತಿ ವಿತರಣೆ - undefined
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರಿಗೆ 'ಕಾಯಕ ರತ್ನ', ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ. ಸುಧಾ ಎನ್. ಮೂರ್ತಿ ಅವರಿಗೆ 'ದಾಸೋಹ ರತ್ನ' (ಅನುಪಸ್ಥಿತಿ) ಹಾಗೂ ಡಾ.ಜೆ.ಎಸ್. ಖಂಡೇರಾವ್, ಎಚ್.ಎ. ಸ್ವಾಮಿ, ಜಿ.ಎನ್. ಬಸವರಾಜಪ್ಪ ಅವರಿಗೆ 'ಬಸವ ವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಧಕರಿಗೆ 'ಕಾಯಕ ರತ್ನ' ಪ್ರಶಸ್ತಿ ವಿತರಣೆ
ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರಿಗೆ 'ಕಾಯಕ ರತ್ನ', ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ. ಸುಧಾ ಎನ್. ಮೂರ್ತಿ ಅವರಿಗೆ 'ದಾಸೋಹ ರತ್ನ' (ಅನುಪಸ್ಥಿತಿ) ಹಾಗೂ ಡಾ.ಜೆ.ಎಸ್. ಖಂಡೇರಾವ್, ಎಚ್.ಎ. ಸ್ವಾಮಿ, ಜಿ.ಎನ್. ಬಸವರಾಜಪ್ಪ ಅವರಿಗೆ 'ಬಸವ ವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸೂಫಿ ಸಂತ ಇಬ್ರಾಹಿಂದ ಸುತಾರ ಸೇರಿದಂತೆ ಮತ್ತಿತರರಿದ್ದರು.