ಚೆನ್ನೈ: ಬ್ಯಾಂಕ್ಗಳು ಮೊದಲು ತಮ್ಮ ಸೇವೆಯು ಗ್ರಾಹಕರಿಗೆ ತಲುಪುತ್ತಿರುವ ಬಗೆಯನ್ನು ವಿಮರ್ಶೆ ಮಾಡಿಕೊಳ್ಳಬೇಕು. ತಮ್ಮ ಸೇವೆಯನ್ನು ವಿಸ್ತರಿಸುವುದಕ್ಕಿಂತ ಮುಂಚಿತವಾಗಿ ಸೇವೆಯ ಬಲಾಬಲ ಮತ್ತು ದೌರ್ಬಲ್ಯಗಳನ್ನು ಮೌಲ್ಯಮಾಪನ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ಗಳಿಗೆ ಕಿವಿಮಾತು ಹೇಳಿದ್ದಾರೆ.
ಬ್ಯಾಂಕಿಂಗ್ ಸೇವೆಯಲ್ಲಿ ಗುಣಮಟ್ಟ ಮುಖ್ಯ.. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ - Nirmala Sitharaman banking
ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ನೀಡಬಹುದಾದ ಸೇವೆಯ ಸಾಮರ್ಥ್ಯವನ್ನು ಅರಿತುಕೊಂಡು ಮೊಬೈಲ್ ಬ್ಯಾಂಕಿಂಗ್ನಂತಹ ವಿಶೇಷ ಸೇವೆಗಳನ್ನು ನೀಡಬೇಕು. ಇದರ ಹೊರತಾಗಿ ಬ್ಯಾಂಕನ್ನು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಸೀತಾರಾಮನ್ ಅಭಿಪ್ರಾಯಪಟ್ಟರು.
ನಿರ್ಮಲಾ ಸೀತಾರಾಮನ್
ನಗರದಲ್ಲಿ ಸಿಟಿ ಯೂನಿಯನ್ ಬ್ಯಾಂಕ್ನ 116ನೇ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ಯಾಂಕ್ಗಳು ಮೊದಲು ತಮ್ಮ ಸೇವೆಯು ಗ್ರಾಹಕರಿಗೆ ತಲುಪುತ್ತಿರುವ ಬಗೆಯನ್ನು ವಿಮರ್ಶೆ ಮಾಡಿಕೊಳ್ಳಬೇಕು. ತಮ್ಮ ಸೇವೆಯನ್ನು ವಿಸ್ತರಿಸುವುದಕ್ಕಿಂತ ಮುಂಚಿತವಾಗಿ ಸೇವೆಯ ಬಲಾಬಲ ಮತ್ತು ದೌರ್ಬಲ್ಯಗಳನ್ನು ಮೌಲ್ಯಮಾಪನ ಮಾಡಬೇಕು ಎಂದರು.