ಚೆನ್ನೈ: ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ಈ ಹಿಂದೆ ನಿಷೇಧಾಜ್ಞೆ ಹೇರಿದ್ದ ಮದ್ರಾಸ್ ಹೈಕೋರ್ಟ್ ಇದೀಗ ಆದೇಶ ವಾಪಸ್ ಪಡೆದಿದೆ. ಹೀಗಾಗಿ ಚೀನಾ ಮೂಲದ ಕಂಪನಿ ನಡೆಸಿರುವ ಕಾನೂನು ಹೋರಾಟದಲ್ಲಿ ಗೆಲುವು ದಾಖಲಿಸಿದಂತಾಗಿದೆ.
ಟಿಕ್ ಟಾಕ್ ಮೇಲೆ ಹೇರಿದ್ದ ನಿಷೇಧಾಜ್ಞೆ ಹಿಂಪಡೆದ ಮದ್ರಾಸ್ ಹೈಕೋರ್ಟ್!
ಇಷ್ಟು ದಿನ ನಿಷೇಧಕ್ಕೊಳಗಾಗಿದ್ದ ಚೀನಾ ಮೂಲದ ವಿಡಿಯೋ ಆ್ಯಪ್ ಟಿಕ್ ಟಾಕ್‌ಗೆ ಇದೀಗ ಮತ್ತೆ ಅನುಮತಿ ಸಿಕ್ಕಿದೆ.
ಈ ವಿಡಿಯೋ ಆ್ಯಪ್ನಲ್ಲಿ ಈ ಹಿಂದೆ ಅಶ್ಲೀಲ ವಿಡಿಯೋ ಹರಿದಾಡಿದ್ದ ಕಾರಣ,ಏಪ್ರಿಲ್ 3ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದನ್ನ ಪ್ರಶ್ನಿಸಿ ಕಂಪನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅದರ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಮುದ್ರಾಸ್ ಹೈಕೋರ್ಟ್ಗೆ ಒಪ್ಪಿಸಿತ್ತು.ಏಪ್ರಿಲ್ 24ರಂದು ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು.
ಅಲ್ಲಿಯವರೆಗೂ ಡೌನ್ ಲೋಡ್ ಮಾಡುವ ಅವಕಾಶ ಸಹ ತೆಗೆದುಹಾಕಲಾಗಿತ್ತು. ಜತೆಗೆ ಇಂದಿಗೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಇಷ್ಟು ದಿನ ನಿಷೇಧಕ್ಕೊಳಗಾಗಿದ್ದ ಚೀನಾ ಮೂಲದ ವಿಡಿಯೋ ಆ್ಯಪ್ ಟಿಕ್ ಟಾಕ್‌ಗೆ ಇದೀಗ ಮತ್ತೆ ಅನುಮತಿ ಸಿಕ್ಕಿದೆ. ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ನಿಷೇಧವನ್ನು ತೆರವುಗೊಳಿಸಿದೆ. ಇಷ್ಟು ದಿನ ಈ ಆ್ಯಪ್ ಬಂದಾಗಿದ್ದ ಕಾರಣ ಒಟ್ಟು 4.5 ಕೋಟಿ ರೂ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಸುಮಾರು 54 ಮಿಲಿಯನ್ ಬಳಕೆದಾರರಿದ್ದಾರೆ ಎಂದು ತಿಳಿದು ಬಂದಿದೆ.