ಬಿಜೆಪಿ ಮನೆ ಮನೆಗೆ ಕರಪತ್ರ ಅಭಿಯಾನ ಕಾರ್ಯಕ್ರಮಕ್ಕೆ ಡಿಸಿಎಂ ಕಾರಜೋಳ ಚಾಲನೆ - ಬಾಗಲಕೋಟೆ ಬಿಜೆಪಿ ಕರಪತ್ರ ಅಭಿಯಾನ
ನಮೋ ನೇತೃತ್ವದ ಕೇಂದ್ರ ಸರ್ಕಾರ 2 ನೇ ಅವಧಿಗೆ ಕಾಲಿಟ್ಟಿದ್ದು ಮೊದಲನೆ ವರ್ಷ ಕೈಗೊಂಡ ಅಭಿವೃದ್ದಿ ಯೋಜನೆಗಳ ಕುರಿತ ಕರಪತ್ರ ಹಂಚಿಕೆ ಅಭಿಯಾನ.
Bagalkote bjp Brochure Campaign driven by dcm karajola
ಬಾಗಲಕೋಟೆ:ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಅವಧಿಯ ಮೊದಲ ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮ, ಅಭಿವೃದ್ದಿ ಯೋಜನೆಗಳ ಮಾಹಿತಿ ಇರುವ ಕರಪತ್ರ ಹಂಚಿಕೆ ಅಭಿಯಾನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಚಾಲನೆ ನೀಡಿದರು.
ಭಾರತೀಯ ಜನತಾ ಪಕ್ಷದ ಮುಧೋಳ ನಗರ ಮಂಡಲ ವಾರ್ಡ್ ನಂ. 20ರಲ್ಲಿ ಆಯೋಜಸಿದ್ದ "ಮನೆ ಮನೆಗೆ ಕರಪತ್ರ ಅಭಿಯಾನ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಮಾಹಿತಿ ನೀಡಿದರು.