ಭಾರಿ ನಿರೀಕ್ಷೆಯೊಂದಿಗೆ ತೆರೆಗಪ್ಪಳಿಸಿದ್ದ ಮಾರ್ವೆಲ್ ಸಿನಿಮಾ ಅವೇಂಜರ್ಸ್ ಎಂಡ್ಗೇಮ್ ಅಕ್ಷರಶಃ ದಾಖಲೆಗಳನ್ನು ಪುಡಿಗಟ್ಟುತ್ತಿದೆ.
ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ನೀವಾಳಿಸಿ ಎಸೆಯುತ್ತಿರುವ ಎಂಡ್ಗೇಮ್ ಸದ್ಯ ಹತ್ತೇ ದಿನಕ್ಕೆ ಹೊಸದೊಂದು ರೆಕಾರ್ಡ್ ತನ್ನ ಹೆಸರಿಗೆ ಬರೆದುಕೊಂಡಿದೆ.
ಎರಡೇ ದಿನದಲ್ಲಿ ನೂರು ಕೋಟಿಯನ್ನು ಸುಲಭವಾಗಿ ದಾಟಿದ್ದ ಎಂಡ್ಗೇಮ್ ಇದೀಗ ಹತ್ತು ದಿನದಲ್ಲಿ 400 ಕೋಟಿ ಗಳಿಕೆ ಮಾಡಿ ಸಂಚಲನ ಮೂಡಿಸಿದೆ.
ಬಿಡುಗಡೆಯಾಗಿ ಎರಡನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಎಂಡ್ಗೇಮ್ ಈಗಾಗಲೇ 1997ರ ಸೂಪರ್ಹಿಟ್ ಸಿನಿಮಾ ಟೈಟಾನಿಕ್ ಗಳಿಕೆಯನ್ನು ಹಿಂದಿಕ್ಕಿ ನಾಗಾಲೋಟ ಮುಂದುವರೆಸಿದೆ.
ಪ್ರಸ್ತುತ ವಿಶ್ವಮಟ್ಟದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಪೈಕಿ ಎಂಡ್ಗೇಮ್ ಎರಡನೇ ಸ್ಥಾನಲ್ಲಿದ್ದು, ಕೆಲ ದಿನಗಳಲ್ಲೇ ಅವತಾರ್ ಗಳಿಕೆಯನ್ನು ಮೀರಿಸಿ ಅಗ್ರಸ್ಥಾನಕ್ಕೇರಲಿದೆ ಎಂದು ಚಿತ್ರಪಂಡಿತರು ಅಂದಾಜಿಸಿದ್ದಾರೆ.