ಶಿವಮೊಗ್ಗ: ನಗರದ ಸಿಟಿ ಬಸ್ಗಳು ನಿಗದಿತ ಸಮಯಕ್ಕಿಂತ ಮೊದಲೇ ಹೋಗುತ್ತಿರುವುದರಿಂದ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕುಸಿದಿದೆ. ಆದ್ದರಿಂದ ನಿಗದಿತ ವೇಳೆಗೆ ಬಸ್ಗಳು ಸಂಚರಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ರಸ್ತೆಗಳಲ್ಲಿ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರಯಾಣಿಕರ ಸಂಖ್ಯೆ ಇಳಿಮುಖ: ಆಟೋ ಚಾಲಕರ ಪ್ರತಿಭಟನೆ - ಆಟೋ
ಶಿವಮೊಗ್ಗದಲ್ಲಿ ನಿಗದಿತ ಸಮಯಕ್ಕೆ ಸಿಟಿ ಬಸ್ಗಳು ಸಂಚರಿಸಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಶನಿವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.
ರಸ್ತೆ ಸಂಚಾರ ತಡೆದು ಪ್ರತಿಭಟಿಸಿದ ಆಟೋ ಚಾಲಕರು
ನಿಗದಿತ ಸಮಯಕ್ಕೆ ಬಸ್ಗಳು ಸಂಚರಿಸುವುದರಿಂದ ಕೆಲವು ಪ್ರಯಾಣಿಕರು ಆಟೋದಲ್ಲಿ ತೆರಳುತ್ತಾರೆ. ನಾವೆಲ್ಲ ಇದೇ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಮನಸೋ ಇಚ್ಛೆ ಬಸ್ಗಳು ಸಂಚರಿಸುವುದರಿಂದ ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಚಾಲಕರ ಅಳಲಾಗಿದೆ.
ನಮ್ಮ ಆದಾಯಕ್ಕೆ ಕುತ್ತು ಬಂದಿದೆ. ಕೂಡಲೇ ನಗರದ ಸಿಟಿ ಬಸ್ಗಳ ಸಂಚಾರಕ್ಕೆ ನಿಗದಿತ ವೇಳಾಪಟ್ಟಿ ಹಾಕಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.