ಸೌತಂಪ್ಟನ್: ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 12 ರನ್ಗಳಿಂದ ಸೋಲುಣಿಸಿದೆ.
ಆಸೀಸ್ ನೀಡಿದ 298 ರನ್ಗಳ ಗುರಿ ಬೆನ್ನೆಟ್ಟಿದ ಇಂಗ್ಲೆಂಡ್ 49.3 ಓವರ್ಗಳಲ್ಲಿ 285 ರನ್ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಬೈರ್ಸ್ಟೋವ್ ಕೇವಲ12 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಜೇಮ್ಸ್ ವಿನ್ಸ್ 64, ಜಾಸನ್ ರಾಯ್ 32, ಜೋಸ್ ಬಟ್ಲರ್ 52 ಹಾಗೂ ಕ್ರಿಸ್ ವೋಕ್ಸ್ 40 ರನ್ಗಳಿಸಿ ಗೆಲುವಿಗಾಗಿ ನಡೆಸಿದ ಪ್ರಯತ್ನ ವಿಫಲವಾಯಿತು.