ದುಬೈ: ಕಳೆದ ತಿಂಗಳಷ್ಟೇ ಭಾರತ ತಂಡವನ್ನು ಭಾರತದ ನೆಲದಲ್ಲಿ ಮಣಿಸಿದ್ದ ಆಸ್ಟ್ರೇಲಿಯಾ ತಂಡ, ಇದೀಗ ಪಾಕಿಸ್ತಾನ ತಂಡವನ್ನು ಏಷ್ಯನ್ ಪಿಚ್ನಲ್ಲಿ 5-0ಯಲ್ಲಿ ಮಣಿಸುವ ಮೂಲಕ ಚಾಂಪಿಯನ್ ತಂಡ ತಾಕತ್ತು ಪ್ರದರ್ಶಿಸಿದೆ. ಭಾರತ, ಇಂಗ್ಲೆಂಡ್ ಸೇರಿದಂತೆ ವಿವಿಧ ತಂಡಗಳಿಗೆ 2019ರ ವಿಶ್ವಕಪ್ನಲ್ಲಿ ಕಠಿಣ ಸ್ಪರ್ಧೆಯೊಡ್ಡಲು ಆಸೀಸ್ ಪಡೆ ಸಿದ್ದವಾಗಿದೆ.
ಭಾರತ ಪ್ರವಾಸಕ್ಕೂ ಮುನ್ನ ಕಳೆದ ಒಂದೂವರೆ ವರ್ಷಗಳಿಲ್ಲಿ ಆಸ್ಟ್ರೇಲಿಯಾ ಆಡಿದ್ದ 18 ಏಕದಿನ ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ ಮೂರು ಪಂದ್ಯಗಳನ್ನು ಮಾತ್ರ. ಆದರೆ ಫಿಂಚ್ ನಾಯಕನಾದ ಮೇಲೆ ಆಸ್ಟ್ರೇಲಿಯಾ ಚಾರ್ಮ್ ಬದಲಾಗಿದೆ. ಭಾರತವನ್ನು 3-2 ರಲ್ಲಿ ಹಾಗೂ ಪಾಕಿಸ್ತಾನವನ್ನು 5-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಮೂಲಕ ತಾವೂ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಮೊದಲ ಸಾಲಿನಲ್ಲಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ.