ಕರ್ನಾಟಕ

karnataka

ETV Bharat / briefs

ಮಸಾಜ್ ಸೆಂಟರ್ ಮೇಲೆ ದಾಳಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರ ಬಂಧನ - ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ

ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಕೊರೊನಾ ಕಪ್ಯೂ೯ ಇದ್ದರೂ ಮಸಾಜ್ ಸೆಂಟರ್ ತೆರೆಯಲಾಗಿತ್ತು. ಇದರ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

attack-on-massage-center-involved-in-prostitution-news
ಮಸಾಜ್ ಸೆಂಟರ್ ಮೇಲೆ ದಾಳಿ

By

Published : Apr 30, 2021, 10:24 PM IST

Updated : May 1, 2021, 3:22 PM IST

ಮೈಸೂರು: ನಗರದ ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿದ ಪೊಲೀಸರು, ಯುವತಿ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಓದಿ: ಹಣಕಾಸು ವ್ಯವಹಾರಕ್ಕೆ ಕೊಲೆ ಯತ್ನ: ಮಂಗಳೂರಿನಲ್ಲಿ 7 ಮಂದಿ ಅಂದರ್

ವಿಜಯ ನಗರದ ವಾಟರ್ ಟ್ಯಾಂಕ್ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಮಸಾಜ್ ಸೆಂಟರ್ ಮೇಲೆ ಡಿಸಿಪಿ ಪ್ರಕಾಶ್‌ಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಕೊರೊನಾ ಕರ್ಫ್ಯೂ ಇದ್ದರೂ ಕೂಡ ಮಸಾಜ್ ಸೆಂಟರ್ ತೆರೆಯಲಾಗಿತ್ತು. ಇದರ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಇದರ ಕಿಂಗ್‌ಪಿನ್ ತಲೆ ಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : May 1, 2021, 3:22 PM IST

ABOUT THE AUTHOR

...view details