ಕರ್ನಾಟಕ

karnataka

ETV Bharat / briefs

ಅಕ್ರಮ ಕಸಾಯಿಖಾನೆ ಮೇಲೆ ದಾಳಿ: ಇಬ್ಬರ ಬಂಧನ

ಮನೆಯ ಶೆಡ್ ನಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ತಾಲೂಕಿನ ಸಂಪ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

Attack on illegal slaughterhouse two men arrested
Attack on illegal slaughterhouse two men arrested

By

Published : Jun 27, 2020, 9:45 PM IST

ಪುತ್ತೂರು:ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿದ ಪುತ್ತೂರು ತಾಲೂಕು ಪೊಲೀಸರು 25 ಕೆಜಿ ಮಾಂಸ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ವಾಗ್ಳೆ ಎಂಬಲ್ಲಿನ ಮನೆಯ ಶೆಡ್ ಒಂದರಲ್ಲಿ ಹಸುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಇಲ್ಯಾಸ್ ಎಸ್ (37) ಹಾಗೂ ಅವರ ಪುತ್ರ ಅಬ್ದುಲ್ ನಜೀಬ್ (19) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯ ಶೆಡ್‌ನಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಂಪ್ಯ ಠಾಣೆಯ ಉಪನಿರೀಕ್ಷಕ ಚೆಲುವಯ್ಯ ಎಂ.ವಿ ಹಾಗೂ ತಂಡ ಈ ಕಸಾಯಿಖಾನೆಗೆ ದಾಳಿ ನಡೆಸಿ, ಸುಮಾರು 5 ಸಾವಿರ ರೂ. ಮೌಲ್ಯದ 25 ಕೆಜಿ ಮಾಂಸ, ಮಚ್ಚು, ಚೂರಿ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ, ಪ್ರಾಣಿಹಿಂಸೆ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details