ಕರ್ನಾಟಕ

karnataka

ETV Bharat / briefs

ಟೆನಿಸ್‌ ರ್‍ಯಾಂಕಿಂಗ್‌: 3ನೇ ಸ್ಥಾನಕ್ಕೇರಿದ 20 ಗ್ರ್ಯಾಂಡ್​ಸ್ಲಾಮ್‌ಗಳ​ ಒಡೆಯ! - ಜೋಕೋವಿಚ್​

ಸೋಮವಾರ ಬಿಡುಗಡೆಗೊಂಡ ನೂತನ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಸ್ವಿಡ್ಜರ್​ಲ್ಯಾಂಡಿನ ರೋಜರ್‌ ಫೆಡೆರರ್‌ ಮತ್ತೆ 3ನೇ ಸ್ಥಾನಕ್ಕೇರಿದ್ದಾರೆ.

ರೋಜರ್‌ ಫೆಡೆರರ್‌

By

Published : May 7, 2019, 3:19 PM IST

ನವದೆಹಲಿ:ನೂತನ ATP ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಮಾಜಿ ನಂ 1 ಆಟಗಾರ ಹಾಗೂ 20 ಗ್ರ್ಯಾಂಡ್​ಸ್ಲಾಮ್ ಪ್ರಶಸ್ತಿ ವಿಜೇತ ರೋಜರ್​ ಫೆಡರರ್​ ಮತ್ತೆ 3 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ಬಿಡುಗಡೆಗೊಂಡ ನೂತನ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಸ್ವಿಡ್ಜರ್​ಲ್ಯಾಂಡಿನ ರೋಜರ್‌ ಫೆಡರರ್‌ 3ನೇ ಸ್ಥಾನಕ್ಕೇರಿದ್ದಾರೆ. ಮ್ಯೂನಿಚ್‌ ಓಪನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದ ಜರ್ಮನಿಯ ಯುವ ಟೆನ್ನಿಸ್​ ಪ್ಲೇಯರ್​ ಅಲೆಕ್ಸಾಂಡರ್‌ ಜ್ವೇರೆವ್‌ ಒಂದು ಸ್ಥಾನ ಕುಸಿದ ಹಿನ್ನಲೆಯಲ್ಲಿ ರೋಜರ್​ 3ನೇ ಸ್ಥಾನಕ್ಕೇರಿದರು.

ಜ್ವೇರೆವ್‌ ಸೋಲಿನ ಲಾಭದ ಜೊತೆಗೆ ಕಳೆದ ವಾರವಷ್ಟೇ ಮ್ಯಾಡ್ರಿಡ್​ ಓಪನ್​ ಪ್ರಶಸ್ತಿ ಜಯಸಿದ್ದರಿಂದ ರೋಜರ್​ ರ್‍ಯಾಂಕಿಂಗ್​ನಲ್ಲಿ ಮೇಲೇರಲು ಕಾರಣವಾಗಿದೆ. ಇನ್ನು ರ್‍ಯಾಂಕಿಂಗ್​ನಲ್ಲಿ ಜೊಕೋವಿಕ್‌, ನಡಾಲ್‌ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿದ್ದಾರೆ.

​ATP ರ್‍ಯಾಂಕಿಂಗ್​ನಲ್ಲಿರುವ ಟಾಪ್​ 5 ಆಟಗಾರರು

1) ನೂವಾಕ್​ ಜೋಕೋವಿಚ್​(ಸರ್ಬಿಯಾ)
2)ರಾಫೆಲ್​ ನಡಾಲ್ (ಸ್ಪೈನ್​)
3)ರೋಜರ್​ ಫೆಡೆರರ್​(ಸ್ವಿಡ್ಜರ್​ಲ್ಯಾಂಡ್​)
4)ಅಲೆಕ್ಸಾಂಡರ್​ ಜ್ವೇರೆವ್​(ಜರ್ಮನಿ)
5)ಡೊಮಿನಿಕ್​ ಥೈಮ್​(ಆಸ್ಟ್ರಿಯ)

ABOUT THE AUTHOR

...view details