ಮಿಯಾಮಿ :ಮಿಯಾಮಿ ಓಪನ್ ಗೆಲ್ಲುವ ಮೂಲಕ ವೃತ್ತಿ ಬದುಕಿನ 101ನೇ ಪ್ರಶಸ್ತಿ ಜಯಿಸಿದ್ದ ಸ್ವಿಡ್ಜ್‌ರ್ಲೆಂಡ್‌ನ ರೋಜರ್ ಫೆಡರರ್ ಎಟಿಪಿ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಏರಿಕೆಯಾಗಿದ್ದು, ಈಗವರು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಭಾನುವಾರ ನಡೆದ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದ ಜಾನ್ ಇಸ್ನೇರ್ ವಿರುದ್ಧ 6-1, 6-4 ನೇರ ಸೆಟ್‌ಗಳಲ್ಲಿ ಜಯಿಸಿದ ಫೆಡರರ್ ದಾಖಲೆಯ 101ನೇಹಾಗೂ 4ನೇ ಮಿಯಾಮಿ ಪ್ರಶಸ್ತಿ ಬಾಚಿಕೊಂಡಿದ್ದರು.