ಮಂಗಳೂರು : ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದಲ್ಲಿ ಸರ್ಪಸಂಸ್ಕಾರ ಮಾಡಲಾಗುತ್ತದೆ ಎಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಪುತ್ತೂರು ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಮಠದ ಅರ್ಚಕ ಕುಮಾರ ಬನ್ನಿಂತಾಯ ಆರೋಪಿಸಿದ್ದಾರೆ.
ಸರ್ಪ ಸಂಸ್ಕಾರ ವಿವಾದ : ಅರ್ಚಕರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು - ಅರ್ಚಕರ ಮೇಲೆ ಹಲ್ಲೆ
ಮಂಗಳೂರಿನ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಅರ್ಚಕ ಸರ್ಪ ಸಂಸ್ಕಾರ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಮಠದ ಅರ್ಚಕ ಕುಮಾರ ಬನ್ನಿಂತಾಯ ಆರೋಪಿಸಿದ್ದಾರೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಚೇರಿಯಲ್ಲಿ ಮಠದ ಅರ್ಚಕ ಕುಮಾರ ಬನ್ನಿಂತಾಯ ಅವರ ಮೇಲೆ ಶನಿವಾರ ಸಂಜೆ ಹಲ್ಲೆ ನಡೆಸಲಾಗಿದೆ.ನನಗೆ ಕರೆ ಮಾಡಿ ಇಲ್ಲಿನ ರಥ ಬೀದಿಗೆ ಬರಲು ಹೇಳಿದರು. ನಾನು ಹೋಗುತ್ತಿರುವಾಗ ಇಬ್ಬರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಫೀಸ್ಗೆ ಕರೆದುಕೊಂಡು ಹೋದರು. ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಂತಹ ಹಲ್ಲೆಗಳನ್ನು ಖಂಡಿಸುತ್ತೇವೆ. ನಮಗೆ ಎಲ್ಲಾ ಹಿಂದೂಗಳು ಒಂದೇ. ಮಠ, ಮಂದಿರಗಳು ಎಲ್ಲವೂ ಸಮಾನ. ಈ ಹಲ್ಲೆಗೈದವರ ಮೇಲೆ ಪೊಲೀಸ್ ಇಲಾಖೆ ಶೀಘ್ರವಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಕೆ ಪ್ರಸನ್ನ ಹೇಳಿದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.