ಕರ್ನಾಟಕ

karnataka

ETV Bharat / briefs

ವರ್ಷಾಂತ್ಯಕ್ಕೆ ಕಣಿವೆ ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್‌.. ಕೇಂದ್ರ ಚುನಾವಣಾ ಆಯೋಗ - ಚುನಾವಣೆ

ಐತಿಹಾಸಿ ಅಮರನಾಥ ಯಾತ್ರೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ವರ್ಷದ ಅಮರನಾಥ ಯಾತ್ರೆ ಅಗಸ್ಟ್ 15ರಂದು ಕೊನೆಗೊಳ್ಳಲಿದೆ.

ಆಯೋಗ

By

Published : Jun 4, 2019, 10:05 PM IST

ನವದೆಹಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಇದೇ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಐತಿಹಾಸಿ ಅಮರನಾಥ ಯಾತ್ರೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ವರ್ಷದ ಅಮರನಾಥ ಯಾತ್ರೆ ಅಗಸ್ಟ್ 15ರಂದು ಕೊನೆಗೊಳ್ಳಲಿದೆ.ಜಮ್ಮು ಮತ್ತು ಕಾಶ್ಮೀರ ಪ್ರತಿಯೊಂದು ಆಗುಹೋಗುಗಳ ಮೇಲೆ ಆಯೋಗ ನಿಗಾ ಇಟ್ಟಿದೆ. ಅಮರನಾಥ ಯಾತ್ರೆ ಮುಕ್ತಾಯವಾಗುತ್ತಿದ್ದಂತೆ ಚುನಾವಣಾ ದಿನಾಂಕ ಘೋಷಿಸಲಾಗುವುದು ಎಂದು ಪ್ರಕಟಿಸಿದೆ. ಭಾರತೀಯ ಜನತಾ ಪಾರ್ಟಿಯು ಮೆಹಬೂಬಾ ಮುಫ್ತಿಯ ಪಿಡಿಪಿ ಪಕ್ಷದ ಜೊತೆಗಿನ ಮೈತ್ರಿ ಕಡಿದುಕೊಂಡ ಬಳಿಕ ಕಣಿವೆ ರಾಜ್ಯ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿತ್ತು.

ABOUT THE AUTHOR

...view details