ಕ್ಸಿಯಾನ್(ಚೀನಾ): ಭಾರತದ ಭರವಸೆಯ ಕುಸ್ತಿಪಟುಗಳಾದ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಪೋಗಟ್ ಚೀನಾದ ಕ್ಷಿಯಾನ್ನಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ 4ನೇ ಪದಕ ತಂದುಕೊಟ್ಟಿದ್ದಾರೆ.
50 ಕೆಜಿ ವಿಭಾಗದಲ್ಲಿ 2018ರ ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದ ವಿನೇಶ್ ಪೋಗಟ್ ಶುಕ್ರವಾರ ನಡೆದ ಕ್ವಾರ್ಟರ್ ಪೈನಲ್ನಲ್ಲಿ ಜಪಾನಿನ ಮಾಯು ಮುಕಿಡಾ ವಿರುದ್ಧ 0-10 ರಲ್ಲಿ ಸೋಲನುಭವಿಸಿದರು.