ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಗುಜರಾತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದೆ.
ಸೋದರಿಯರ ಮೇಲಿನ ರೇಪ್ ಕೇಸ್ : ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ! - ಜೀವಾವಧಿ ಶಿಕ್ಷೆ
ಸೂರತ್ ಮೂಲದ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತಿರುವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಸೂರತ್ನ ಸೆಷನ್ ಕೋರ್ಟ್ ಈ ತೀರ್ಪು ಹೊರಡಿಸಿದ್ದು, 1ಲಕ್ಷ ದಂಡ ಕೂಡ ವಿಧಿಸಿದೆ. ಇವರ ಜತೆಗೆ ಇತರೆ ಆರೋಪಿಗಳಾಗಿರುವ ಗಂಗಾ, ಜಮುನಾ ಹಾಗೂ ಹನುಮಾನ್‌ಗೆ 10 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದ್ದು, 10 ಸಾವಿರ ದಂಡ ಹಾಕಿದೆ.
ಸೂರತ್ ಮೂಲದ ಇಬ್ಬರು ಸಹೋದರಿಯರು ತಮ್ಮ ಮೇಲೆ ಸ್ವಯಂಘೋಷಿತ ದೇವ ಮಾನವ ನಾರಾಯಣ ಸಾಯಿ ಅತ್ಯಾಚಾರವೆಸಗಿರುವುದಾಗಿ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. 2002 ಹಾಗೂ 2005ರ ಮಧ್ಯೆ ತಮ್ಮ ಮೇಲೆ ನಾರಾಯಣ ಸಾಯಿ ಅತ್ಯಾಚಾರಗೈದಿದ್ದಾಗಿ ಆರೋಪಿಸಿ, 2013ರಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇವರು ಅಸಾರಾಂ ಬಾಪು ಆಶ್ರಮದಲ್ಲಿದ್ದರು. 2013ರಲ್ಲಿ ಅಸಾರಾಂ ಬಾಪು ಪುತ್ರ 2013ರಲ್ಲಿ ಬಂಧನವಾಗಿ ಜೈಲಿನಲ್ಲಿದ್ದಾನೆ.