ಕರ್ನಾಟಕ

karnataka

ETV Bharat / briefs

ಆಶಾಕಾರ್ಯಕರ್ತೆಯರ ಮೇಲೆ ದಬ್ಬಾಳಿಕೆ ಮಾಡಿದ್ದವರ ಬಂಧನ.. ಖಡಕ್​ ವಾರ್ನಿಂಗ್​ - Eregowdukoppalu

ಎರೇಗೌಡನಕೊಪ್ಪಲು ಗ್ರಾಮದಲ್ಲಿ‌ ಇಂದು ಕೋವಿಡ್ ಸೋಂಕಿತ ಸಾವನಪ್ಪಿದ್ದು, ಆ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಕಾರ್ಯಕರ್ತರು ತಪಾಸಣೆ ನಡೆಸಿ ಬುದ್ದಿವಾದ ಹೇಳಿದಕ್ಕೆ ಜನರು ದಬ್ಬಾಳಿಕೆ ನಡೆಸಿದ್ದಾರೆ‌.

 Arrested of those who tyrannize over health activist
Arrested of those who tyrannize over health activist

By

Published : Jun 11, 2021, 10:11 PM IST

ಮಂಡ್ಯ: ಆಶಾಕಾರ್ಯತರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪಾಂಡವಪುರ ತಾಲೂಕಿನ ಎರೇಗೌಡನಕೊಪ್ಪಲು ಗ್ರಾಮದಲ್ಲಿ ಜರುಗಿದೆ.

ಎರೇಗೌಡನಕೊಪ್ಪಲು ಗ್ರಾಮದಲ್ಲಿ‌ ಒಂದೇ ದಿನ 25 ಪ್ರಕರಣ ಪತ್ತೆಯಾಗಿವೆ. ಅಲ್ಲದೇ ಇಂದು ಕೋವಿಡ್ ಸೋಂಕಿತ ಸಾವನ್ನಪ್ಪಿದ್ದು, ಆ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ನಿಯಮ ಉಲ್ಲಂಘಿಸಿದ್ದಾರೆ‌. ಈ ವೇಳೆ, ಆಶಾ ಕಾರ್ಯಕರ್ತರು ತಪಾಸಣೆ ನಡೆಸಿ ಬುದ್ದಿವಾದ ಹೇಳಿದಕ್ಕೆ ದಬ್ಬಾಳಿಕೆ ನಡೆಸಿದ್ದಾರೆ‌.

ದಬ್ಬಾಳಿಕೆ‌ ಮಾಡಿದ ಗ್ರಾಮದ ಮೂವರು ವ್ಯಕ್ತಿಗಳ‌ ಮೇಲೆ ತಹಶೀಲ್ದಾರ್​ ಹಾಗೂ ಸರ್ಕಲ್ ‌ಇನ್ಸ್​ಪೆಕ್ಟರ್ ಗ್ರಾಮಕ್ಕೆ ಭೇಟಿ ನೀಡಿ ಮೂವರನ್ನ ಬಂಧಿಸಿದ್ದಾರೆ. ಗ್ರಾಮದಲ್ಲಿ ಯಾರಾದರೂ ಕೋವಿಡ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details