ಹಾವೇರಿ: ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ದನಗಳ್ಳರ ಬಂಧನ - ಪೊಲೀಸ್
ಬಂಧಿತರಿಂದ 2 ಎತ್ತು ಹಾಗೂ 1 ಬುಲೆರೋ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ. ರಾಣೇಬೆನ್ನೂರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿಯ ಜಿಲ್ಲೆಯ ರಾಣೇಬೆನ್ನೂರು ಪೊಲೀಸ್ರು ಜಾನುವಾರು ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ
ಜಿಲ್ಲೆಯ ರಾಣೇಬೆನ್ನೂರು ನಗರದ ಜಾನುವಾರು ಪೇಟೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ರುದ್ರೇಶ ಮತ್ತೂರ (28), ರುದ್ರಸ್ವಾಮಿ ಹಿರೇಮಠ (27) ಬಂಧಿತ ಆರೋಪಿಗಳು.
ಮತ್ತೊಬ್ಬ ಆರೋಪಿ ಅಶೋಕ ಎಂಬುವವ ತಲೆ ಮರೆಸಿಕೊಂಡಿದ್ದಾನೆ. ಬಂಧಿತರಿಂದ 2 ಎತ್ತು ಹಾಗೂ 1 ಬುಲೆರೋ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ. ರಾಣೇಬೆನ್ನೂರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.