ದಿಮಾಪುರ (ನಾಗಾಲ್ಯಾಂಡ್):ಅರುಣಾಚಲ ಪ್ರದೇಶದ ಉತ್ತರ ಗಡಿಗಳಲ್ಲಿನ ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಈಶಾನ್ಯದ ಒಳನಾಡಿನ ಭದ್ರತಾ ಪರಿಸ್ಥಿತಿಗಳನ್ನು ಪರಿಶೀಲಿಸಲು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಎರಡು ದಿನಗಳ ಕಾಲ ನಾಗಾಲ್ಯಾಂಡ್ಗೆ ಪ್ರಯಾಣಿಸಿದ್ದಾರೆ.
ಭದ್ರತಾ ಪರಿಸ್ಥಿತಿ ಪರಿಶೀಲನೆ: ನಾಗಾಲ್ಯಾಂಡ್ ತಲುಪಿದ ಸೇನಾ ಮುಖ್ಯಸ್ಥ ನರವಣೆ - ದಿಮಾಪುರದ ಕಾರ್ಪ್ಸ್ ಪ್ರಧಾನ ಕಚೇರಿ
ಈಶಾನ್ಯದ ಒಳನಾಡಿನ ಭದ್ರತಾ ಪರಿಸ್ಥಿತಿಗಳನ್ನು ಪರಿಶೀಲಿಸಲು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ನಾಗಾಲ್ಯಾಂಡ್ಗೆ ಪ್ರಯಾಣ ಬೆಳೆಸಿದ್ದಾರೆ.
![ಭದ್ರತಾ ಪರಿಸ್ಥಿತಿ ಪರಿಶೀಲನೆ: ನಾಗಾಲ್ಯಾಂಡ್ ತಲುಪಿದ ಸೇನಾ ಮುಖ್ಯಸ್ಥ ನರವಣೆ MM naravane](https://etvbharatimages.akamaized.net/etvbharat/prod-images/768-512-03:01:39:1621589499-11838837-867-11838837-1621566157739.jpg)
MM naravane
ದಿಮಾಪುರದ ಕಾರ್ಪ್ಸ್ ಪ್ರಧಾನ ಕಚೇರಿಗೆ ತಲುಪಿರುವ ಸೇನಾ ಮುಖ್ಯಸ್ಥರಿಗೆ ಲೆಫ್ಟಿನೆಂಟ್ ಜನರಲ್ ಜಾನ್ಸನ್ ಮ್ಯಾಥ್ಯೂ, ಜನರಲ್ ಆಫೀಸರ್ ಕಮಾಂಡಿಂಗ್ ಸ್ಪಿಯರ್ ಕಾರ್ಪ್ಸ್ ಮತ್ತು ಡಿವಿಷನ್ ಕಮಾಂಡರ್‌ಗಳು ಸ್ವಾಗತ ಕೋರಿದ್ದಾರೆ. ಈ ಬಳಿಕ ಉತ್ತರ ಗಡಿಗಳಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸಿದ್ಧತೆ ಕುರಿತು ವಿವರಿಸಿದ್ದಾರೆ.
ಸೈನ್ಯದ ಮುಖ್ಯಸ್ಥರು ಅತ್ಯುತ್ತಮ ಜಾಗರೂಕತೆ ಕಾಪಾಡಿಕೊಂಡಿದ್ದಕ್ಕಾಗಿ ನರವಣೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚಟುವಟಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವಂತೆ ಸೂಚಿಸಿದರು.