ನವದೆಹಲಿ: ಉತ್ತರಪ್ರದೇಶದಲ್ಲಿ ಈ ಬಾರಿ ಬಿಜೆಪಿಯನ್ನು ಕಟ್ಟಿ ಹಾಕಲೇಬೇಕೆಂದು ಪಣತೊಟ್ಟು ಮತಸಮರಕ್ಕಿಳಿದಿದ್ದ ಕಾಂಗ್ರೆಸ್ ಈ ಬಾರಿಯೂ ಮುಖಭಂಗ ಅನುಭವಿಸಿದೆ. ಅಮಿತ್ ಶಾ-ಮೋದಿ ಹಾಗೂ ಯೋಗಿ ಪ್ಲಾನ್ ಮುಂದೆ ಕೈ ಪಕ್ಷದ ಸರ್ಕಸ್ ನಡೆಯಲಿಲ್ಲ. ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲನುಭವಿಸಿದ್ದರು. ಈ ಕುರಿತು ನಡೆದ ಆತ್ಮವಿಮರ್ಶಾ ಸಭೆಯಲ್ಲಿ ಮುಖಂಡರೇ ಕಚ್ಚಾಡಿಕೊಂಡಿದ್ದಾರೆ.
ಉತ್ತರ ಗೆಲ್ಲಲು ರಾಹುಲ್ ಗಾಂಧಿ ಸ್ವತಃ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಮತಪ್ರಚಾರಕ್ಕೆ ಇಳಿಸಿದ್ದರು. ಜನಸಂಖ್ಯೆಯಲ್ಲಿ ದೇಶದ ದೊಡ್ಡ ರಾಜ್ಯಕ್ಕೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಪ್ರಿಯಾಂಕಾ ಉತ್ತರ ಪ್ರದೇಶದಲ್ಲೆಲ್ಲಾ ಸುತ್ತಾಡಿ ಮತಭೇಟೆ ನಡೆಸಿದ್ದರು. ಆದರೂ ಪಕ್ಷ ಮಾತ್ರ ಮೇಲೇಳಲೇ ಇಲ್ಲ.