ಕರ್ನಾಟಕ

karnataka

ETV Bharat / briefs

ಅರಕಲಗೂಡು ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ - Arakalagudu latest news

ಇಂದು ಅರಕಲಗೂಡು ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ತನ್ನ ಸದಸ್ಯರೊಂದಿಗೆ ಸಭೆ ನಡೆಸಿತು.

Hassan
Hassan

By

Published : Jun 6, 2020, 4:54 PM IST

ಅರಕಲಗೂಡು(ಹಾಸನ‍):ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ತನ್ನ ಸದಸ್ಯರೊಂದಿಗೆ ಇಂದು ಸಭೆ ನಡೆಸಿತು.

ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮತ್ತು ಕಾರ್ಯದರ್ಶಿ ಚನ್ನಕೇಶವೇಗೌಡ ಎಂಬುವವರು ಮಾಧ್ಯಮದವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಕೊರೊನಾ ಲಾಕ್​ಡೌನ್ ವೇಳೆ ನಮ್ಮ ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಯಾವುದೇ ಸಮಸ್ಯೆ ಇಲ್ಲದೆ ತಾಲೂಕಿನ ಬಡಜನರಿಗೆ ಯಶಸ್ವಿಯಾಗಿ ಪಡಿತರ ಸಾಮಾಗ್ರಿಗಳನ್ನು ಹಂಚಿಕೆ ಮಾಡಿದ್ದಾರೆ.

ಸರ್ಕಾರ ಹೊರ ರಾಜ್ಯ, ಜಿಲ್ಲೆಗಳಿಂದ ಜೀವನೋಪಾಯಕ್ಕಾಗಿ ಬಂದಿರುವ ಕೂಲಿ ಕಾರ್ಮಿಕರಿಗೆ, ಬಡಜನರಿಗೆ ಆಧಾರ್ ಕಾರ್ಡ್ ಇದ್ದರೆ ಸಾಕು ಪಡಿತರ ಸಾಮಾಗ್ರಿಗಳನ್ನು ವಿತರಿಸಲು ಆದೇಶಿಸಿತ್ತು.

ಈ ಸಂಬಂಧ ಮೇ ಮತ್ತು ಜೂನ್ ಎರಡು ತಿಂಗಳ ತಲಾ 5 ಕೆಜಿ ಅಕ್ಕಿ, 1 ಕೆಜಿ ಕಡಲೆ ಬೆಳೆ, ತಲಾ 10 ಕೆಜಿ ಅಕ್ಕಿ, 2 ಕೆಜಿ ಬೇಳೆ ವಿತರಿಸಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಅಂತವರು ಯಾರೇ ಇದ್ದರೂ ಅವರಿಗೆ ಪಡಿತರ ನೀಡುತ್ತೇವೆ ಎಂದರು.

ABOUT THE AUTHOR

...view details