ಕಾರವಾರ:ದೇವಾಲಯಗಳು ಅಕ್ರಮವಾಗಿದ್ದರೆ ಒಡೆಯುವ ಮೊದಲು ಊರ ಜನರ ವಿಶ್ವಾಸಗಳಿಸಬೇಕು. ಜೊತೆಗೆ ಪರ್ಯಾಯ ವ್ಯವಸ್ಥೆಕೂಡ ಮಾಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅಂಕೋಲಾದ ಕೈಗಡಿಯಲ್ಲಿ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 2008ರ ದೇವಾಲಯ ಯಾವುದು ಇದೆ ಅದನ್ನು ಸಕ್ರಮ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ಮೈಸೂರು ಘಟನೆ ಖಂಡನೀಯವಾಗಿದೆ. ಮೈಸೂರು ದೇವಾಲಯ ಚೋಳರ ಕಾಲದಾಗಿದ್ದು, ಸಕ್ರಮಗೊಳಿಸಲು ಪ್ರಕ್ರಿಯೆ ಮಾಡಬೇಕು 2008ರ ನಂತರ ಕಟ್ಟಿದ ದೇವಾಲಯಗಳ ಬಗ್ಗೆ ಪರಿಶೀಲಿಸಿ ಪುರಾತನ ದೇವಾಲಯಗಳನ್ನು ಉಳಿಸುವ ಮತ್ತು ಸಕ್ರಮಗೊಳಿಸುವ ಬಗ್ಗೆ ಪರಿಶೀಲಿಸಬೇಕು ಎಂದರು.