ಕರ್ನಾಟಕ

karnataka

ETV Bharat / briefs

ಸಲಿಂಗಿ ಸಿನಿಮಾದಿಂದ ದೂರ ಉಳಿಯುವಂತೆ ನಿರ್ಮಾಪಕರಿಂದ ಎಚ್ಚರಿಕೆ ಅನ್ಶುಮಾನ್ - gay related Movie

"ಹಮ್ ಭೀ ಅಕೆಲೆ ತುಮ್ ಭೀ ಅಕೆಲೆ" ಚಿತ್ರದಲ್ಲಿ ಅನ್ಶುಮಾನ್​ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದಕ್ಕೆ ಬಾಲಿವುಡ್​ನ ಪ್ರತಿಷ್ಠಿತ ನಿರ್ಮಾಪಕರು, ಅಂತಹ ಸಿನಿಮಾದಲ್ಲಿ ನಟಿಸದಂತೆ, ಚಿತ್ರ ನಿರ್ಮಾಣ ಮಾಡದಂತೆ ಎಚ್ಚರಿಕೆ ನೀಡಿದ್ದಾರಂತೆ. ಈ ಬಗ್ಗೆ ಸ್ವತಃ ಅನ್ಶುಮಾನ್​ ತಿಳಿಸಿದ್ದಾರೆ.

anshuman
anshuman

By

Published : May 19, 2021, 6:29 PM IST

ಮುಂಬೈ: ಒಟಿಟಿಯಲ್ಲಿ ಬಿಡುಗಡೆಯಾದ "ಹಮ್ ಭೀ ಅಕೆಲೆ ತುಮ್ ಭೀ ಅಕೆಲೆ" ಚಿತ್ರದಲ್ಲಿ ಅನ್ಶುಮಾನ್​ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇಂತಹ ಪಾತ್ರಗಳಲ್ಲಿ ನಟಿಸದೇ ದೂರವಿರಬೇಕು ಎಂದು ಪ್ರತಿಷ್ಠಿತ ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಅನ್ಶುಮಾನ್ ತಿಳಿಸಿದ್ದಾರೆ.

"ಭಾರತದಲ್ಲಿ ಕಾಮಿಕ್ ಅಲ್ಲದ ಚಿತ್ರವೊಂದರಲ್ಲಿ ಸಲಿಂಗಕಾಮಿ ಪಾತ್ರವನ್ನು ನಿರ್ವಹಿಸುವುದು ಆತ್ಮಹತ್ಯೆಗೆ ಸಮ ಎಂದು ಪ್ರತಿಷ್ಠಿತ ನಿರ್ಮಾಪಕರಿಂದ ನನಗೆ ತಿಳಿಯಿತು. ಈ ಸಿನಿಮಾ ಎಲ್​ಜಿಬಿಟಿಕ್ಯೂ ವರ್ಗವನ್ನು ಸಾಮಾನ್ಯೀಕರಿಸಲು, ಮಾನವೀಯಗೊಳಿಸುವ ಉದ್ದೇಶದಿಂದ ಕಥೆ ರಚಿಸಲಾಗಿದೆ. ಪ್ರೀತಿ ಮತ್ತು ಸ್ನೇಹವನ್ನು ಮುಖ್ಯ ಸಿದ್ಧಾಂತಗಳಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ "ಎಂದು ಅವರು ಹೇಳುತ್ತಾರೆ.

"ಚಿತ್ರವನ್ನು ಇಷ್ಟಪಟ್ಟ ಅಥವಾ ಇಷ್ಟಪಡದ ಮತ್ತು ಸ್ವೀಕಾರದ ಕುರಿತು ಸಂಭಾಷಣೆಗಳನ್ನು ಪ್ರಾರಂಭಿಸಿದ ಪ್ರೇಕ್ಷಕರಿಗೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಚಿತ್ರದ ಮೇಲಿನ ಈ ಪ್ರೀತಿ ನನ್ನ ತಾಯಿಯ ಆಶೀರ್ವಾದಕ್ಕೆ ಸಮ" ಎಂದು ನಟ ಹೇಳಿದ್ದಾರೆ.

ಈ ಚಿತ್ರ ಇತ್ತೀಚಿಗೆ ಡಿಸ್ನಿ + ಹಾಟ್ಸರ್​ನಲ್ಲಿ ಬಿಡುಗಡೆಯಾಗಿದೆ.

ABOUT THE AUTHOR

...view details