ಮುಂಬೈ:ಬಾಲಿವುಡ್ನ ಎವರ್ಗ್ರೀನ್ ನಟ ಅನಿಲ್ ಕಪೂರ್ - ಪತ್ನಿ ಸುನೀತಾ ಕಪೂರ್ ತಮ್ಮ 37 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರೀತಿಯ ಮಡದಿಗಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
37ನೇ ವಾರ್ಷಿಕೋತ್ಸವ; ಮಡದಿಗಾಗಿ 'ಪ್ರೀತಿಯ' ಪೋಸ್ಟ್ ಮಾಡಿದ ಅನಿಲ್ ಕಪೂರ್ - ಅನಿಲ್ ಕಪೂರ್ ಇತ್ತೀಚಿನ ಸುದ್ದಿ
ನಟ ಅನಿಲ್ ಕಪೂರ್-ಪತ್ನಿ ಸುನೀತಾ ಕಪೂರ್ ತಮ್ಮ 37 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಇನ್ಸ್ಟಾಗ್ರಾಂನಲ್ಲಿ ಅಪರೂಪದ ದಂಪತಿ ಫೋಟೋ ಹಂಚಿಕೊಂಡಿದ್ದಾರೆ.
Anil kapoor
ಇನ್ನು ದಂಪತಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಎಲ್ಲ ಪ್ರೇಮ ಕಥೆಗಳು ಮತ್ತು ಉಲ್ಲೇಖಗಳು ನಮ್ಮ ಪ್ರೀತಿಯ ಮುಂದೆ ಸರಿಸಾಟಿಯಾಗುವುದಿಲ್ಲ. ನಿನ್ನೊಡನೆ ಇರುವಾಗ ನಾನು ಸುರಕ್ಷಿತ ಮತ್ತು ಸಂತೋಷದಿಂದಿದ್ದೇನೆ ಎಂದು ನನಗೆ ತಿಳಿದಿದೆ. ನೀನು ನಮ್ಮ ಕುಟುಂಬದ ಅಡಿಪಾಯ. ವಾರ್ಷಿಕೋತ್ಸವದ ಶುಭಾಶಯಗಳು" ಎಂದು ನಟ ಹೇಳಿದ್ದಾರೆ.
ಇನ್ನು ಅನಿಲ್ ಕಪೂರ್ ಮತ್ತು ಸುನಿತಾ ಕಪೂರ್ ಫೋಟೋಗಳಿಗೆ ಇತರ ನಟರು, ಅಭಿಮಾನಿಗಳು ಪ್ರೀತಿಯಿಂದ ಕಮೆಂಟ್ ಮಾಡಿದ್ದಲ್ಲದೇ, ಶುಭಾಶಯ ಕೋರಿದ್ದಾರೆ.