ಕರ್ನಾಟಕ

karnataka

ETV Bharat / briefs

ಪಂಜಾಬ್​​​​ ಚಾಂಪಿಯನ್​​​ ಆದರೆ ಶೂನಲ್ಲಿ ಆಲ್ಕೋಹಾಲ್​​​​ ಕುಡಿತಾರಂತೆ ಈ ಬೌಲರ್​​​​! -  ಐಪಿಎಲ್​

2018ರ ಐಪಿಎಲ್​ನ ಆರೆಂಜ್​ ಕ್ಯಾಪ್​ ವಿನ್ನರ್​ ಆಂಡ್ರ್ಯೂ ಟೈ, ಕಿಂಗ್ಸ್​ ಇಲೆವೆನ್​ ಪಂಜಾಬ್​ ಈ ಬಾರಿ ಏನಾದರು ಐಪಿಎಲ್​ ಚಾಂಪಿಯನ್​ ಆದರೆ ತಮ್ಮ ಶೂ ಒಳಗೆ ಶಾಂಪೇನ್‌ ಸುರಿದು ಕುಡಿದು ಸಂಭ್ರಮಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಆಂಡ್ರ್ಯೂ ಟೈ

By

Published : Mar 30, 2019, 5:27 PM IST

ಮೊಹಾಲಿ: 2018ರ ಐಪಿಎಲ್​ ಆವೃತ್ತಿಯಲ್ಲಿ ಆರೆಂಜ್​ ಕ್ಯಾಪ್​ ಪಡೆದಿದ್ದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಬೌಲರ್​ ಆಂಡ್ರ್ಯೂ ಟೈ ಈ ಬಾರಿ ಪಂಜಾಬ್​ ಚಾಂಪಿಯನ್ ಆದರೆ ತಮ್ಮ ಶೂನಲ್ಲಿ ಶಾಂಪೇನ್​ ಕುಡಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಆಸ್ಟ್ರೇಲಿಯದ ಕ್ರಿಕೆಟಿಗನಾಗಿರುವ ಆಂಡ್ರ್ಯೂ, ಕಿಂಗ್ಸ್​ ಇಲೆವೆನ್​ ಪಂಜಾಬ್​ ಈ ಬಾರಿ ಏನಾದರು ಐಪಿಎಲ್​ ಚಾಂಪಿಯನ್​ ಆದರೆ ತಮ್ಮ ಶೂ ಒಳಗೆ ಶಾಂಪೇನ್‌ ಸುರಿದು ಕುಡಿದು ಸಂಭ್ರಮಿಸುವುದಾಗಿ ಹೇಳಿದ್ದಾರೆ.

ಡ್ರಿಂಕಿಂಗ್‌ ಫ್ರಮ್​ ಶೂಸ್‌ ಅಥವಾ ಶೋಯ್​ ಎಂಬುದು ಆಸ್ಟ್ರೇಲಿಯಾದಲ್ಲಿ ತಮ್ಮ ಗೆಲುವಿನ ಸಂಭ್ರಮವನ್ನು ಆಚರಿಸುವ ಒಂದು ವಿಧಾನ. ಇದು ಭಾರತದ ಮಟ್ಟಿಗೆ ವಿಚಿತ್ರ ಕಲ್ಪನೆಯಾಗಿದೆ. ಆದರೆ ಈ ರೀತಿ ಶೂನಲ್ಲಿ ಆಲ್ಕೋಹಾಲ್​ ಅಥವಾ ಶಾಂಪೇನ್​ ಸುರಿದು ಕುಡಿಯುವುದು ಮಾಮೂಲಾಗಿದೆ.

2016ರಲ್ಲಿ ಆಸ್ಟ್ರೇಲಿಯಾದ ಮೋಟೊ ಜಿಪಿ ರೈಡರ್‌ ಜಾಕ್‌ ಮಿಲ್ಲರ್‌ ಮೊದಲ ಬಾರಿಗೆ ಪ್ರೀಮಿಯರ್‌ ಕ್ಲಾಸ್‌ ಗೆಲುವಿನ ಬಳಿಕ ತಮ್ಮ ಶೂನಲ್ಲಿ ಶಾಂಪೇನ್​ ಸುರಿದುಕೊಡು ಕುಡಿದು ಸಂಭ್ರನಿಸಿದ್ದರು. ನಂತರ ಫಾರ್ಮುಲಾ-1 ಚಾಲಕ ಡೇನಿಯಲ್‌ ರಿಕಾರ್ಡೊ ಕೂಡ ಇದೇ ರೀತಿ ಸಂಭ್ರಮಿಸಿದ್ದರು.

ಇದೀಗ 2018ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಆಗಿರುವ ಆ್ಯಂಡ್ರ್ಯೂ ಟೈ ಫಾರ್ಮುಲ ಒನ್​ನ ಫ್ಯಾನ್​ ಆಗಿದ್ದು, ಈ ಬಾರಿ ಪಂಜಾಬ್​ ಚಾಂಪಿಯನ್​ ಆದರೆ ತಾವೂ ಶಾಂಪೇನ್​ಅನ್ನು ಶೂನಲ್ಲಿ ಸೇವಿಸುವುದಾಗಿ ಹೇಳಿಕೊಂಡಿದ್ದಾರೆ.

ABOUT THE AUTHOR

...view details