ಕರ್ನಾಟಕ

karnataka

ETV Bharat / briefs

TikTok ದುಸ್ಸಾಹಸ: ತುಮಕೂರಲ್ಲಿ ಯುವಕನ ತಲೆ, ಬೆನ್ನುಮೂಳೆ ಮುರಿತ! - undefined

ಟಿಕ್​ಟಾಕ್​ ಸಾಹಸ ದೃಶ್ಯಕ್ಕೆ ಮುಂದಾಗಿದ್ದ ಯುವಕನೋರ್ವ ಕತ್ತು ಮತ್ತು ಬೆನ್ನು ಮೂಳೆ ಮುರಿದುಕೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಟಿಕ್​ಟಾಕ್​ನಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ಕುಮಾರ್

By

Published : Jun 18, 2019, 7:06 PM IST

ತುಮಕೂರು:ತಾಲೂಕಿನ ನಾಯಕನಹಳ್ಳಿಯ ಗೋಡೆಕೆರೆಯ ಯುವಕ ಟಿಕ್​ಟಾಕ್​ನಲ್ಲಿ ಸಾಹಸ ದೃಶ್ಯ ಮಾಡಲು ಹೋಗಿ ಬೆನ್ನು ಹಾಗೂ ಕುತ್ತಿಗೆ ಮೂಳೆಗಳನ್ನು ಮುರಿದುಕೊಂಡ ಘಟನೆ ನಡೆದಿದೆ.

ಟಿಕ್‌ ಟಾಕ್‌ ಆ್ಯಪ್‌ ಗೆ ಸಾಹಸ ದೃಶ್ಯ ಮಾಡಲು ಹೋಗಿ ಅಪಾಯವನ್ನೇ ಮೈಮೇಲೆಳೆದುಕೊಂಡ ಯುವಕ

ಸ್ನೇಹಿತರಿಗೆ ಸಾಹಸ ದೃಶ್ಯ ರೆಕಾರ್ಡ್​ ಮಾಡಲು ಹೇಳಿದ ಕುಮಾರ್​ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದಾನೆ. ಸ್ವಲ್ಪ ಹೊತ್ತಲ್ಲೇ ಸ್ನೇಹಿತನ ನೆರವಿನಿಂದ ಹಿಮ್ಮುಖವಾಗಿ ಜಿಗಿದಿದ್ದಾನೆ. ಪರಿಣಾಮ ಆತ ಕೆಳಮುಖವಾಗಿ ಬಿದ್ದಿದ್ದು, ಕತ್ತು, ಬೆನ್ನುಮೂಳೆಗೆ ಬಲವಾದ ಏಟು ಬಿದ್ದಿದೆ. ಅಷ್ಟೇ ಅಲ್ಲ, ಬೆನ್ನು, ಕುತ್ತಿಗೆ ಭಾಗದ ಮೂಳೆಗಳು ಮುರಿದಿವೆ. ಆತ ತೀವ್ರ ನೋವಿನಿಂದ ಬಳಲುತ್ತಿದ್ದಾನೆ.

ಸಾಹಸ ಮಾಡಲು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಕುಮಾರ್ ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇಂಥ ಹುಚ್ಚಾಟಗಳಿಂದ ಜೀವಕ್ಕೆ ಕುತ್ತು ತಂದುಕೊಂಡಿರುವ ಈ ಯುವಕನ ಘಟನೆ ಇತರರು ಇಂಥಾ ಸಾಹಸಕ್ಕೆ ಕೈ ಹಾಕದಿರಲು ಎಚ್ಚರಿಕೆಯ ಕರೆಗಂಟೆಯಾಗಿದೆ.

For All Latest Updates

TAGGED:

ABOUT THE AUTHOR

...view details