ಚಿಕ್ಕೋಡಿ: ನೌಕರಿ ಕೊಡಿಸುವ ಆಮಿಷವೊಡ್ಡಿದ ಸರ್ಕಾರಿ ಅಧಿಕಾರಿಯೊಬ್ಬ ಹಣ ಪಡೆದ ಬಳಿಕ ವರ್ಗಾವಣೆ ಮೂಲಕ ಬೇರೆಡೆ ಹೋಗಿ ಹಣವನ್ನೂ, ನೌಕರಿಯನ್ನೂ ಕೊಡಿಸದೆ ಸತಾಯಿಸುತ್ತಿರುವ ಪ್ರಕರಣ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ಪ್ರಕರಣದ ಹಿನ್ನೆಲೆ:
ಚಿಕ್ಕೋಡಿ: ನೌಕರಿ ಕೊಡಿಸುವ ಆಮಿಷವೊಡ್ಡಿದ ಸರ್ಕಾರಿ ಅಧಿಕಾರಿಯೊಬ್ಬ ಹಣ ಪಡೆದ ಬಳಿಕ ವರ್ಗಾವಣೆ ಮೂಲಕ ಬೇರೆಡೆ ಹೋಗಿ ಹಣವನ್ನೂ, ನೌಕರಿಯನ್ನೂ ಕೊಡಿಸದೆ ಸತಾಯಿಸುತ್ತಿರುವ ಪ್ರಕರಣ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ಪ್ರಕರಣದ ಹಿನ್ನೆಲೆ:
ರಾಯಬಾಗ ತಾಲೂಕಿನ ಸಿ.ಡಿ.ಪಿ.ಒ, ಡಿ.ಎಚ್.ಪಾಯಕ್ ಎಂಬವರು ಜ್ಯೋತಿ ಗಣೇಶ ರಾಠೋಡ್ ಎಂಬ ಮಹಿಳೆಗೆ ಅಂಗನವಾಡಿ ಕಾರ್ಯಕರ್ತೆಯ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿಆಕೆಯಿಂದ 2013 ರಲ್ಲಿಯೇ 1 ಲಕ್ಷ 25 ಸಾವಿರ ರೂ ಹಣವನ್ನೂ ಪಡೆದಿದ್ದರಂತೆ. ಆದರೆ ಈಗ ಕೆಲಸವನ್ನೂ ಕೊಡಿಸದೇ, ಹಣವನ್ನೂ ಮರಳಿಸದೇ ಸತಾಯಿಸುತ್ತಿದ್ದಾರೆ ಎಂದು ಜ್ಯೋತಿ ಗಣೇಶ್ ಆರೋಪಿಸಿದ್ದಾರೆ.
ಇದರಿಂದ ಬೇಸತ್ತ ಜ್ಯೋತಿ ಅವರ ತಂದೆ ರಾಮರಾವ್ ರಾಠೋಡ್ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ಸಿ.ಡಿ.ಪಿ.ಒ ಬಳಿ ಹಣ ಮರಳಿ ಕೊಡಿ ಎಂದು ಕೇಳಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿರುವ ಬಗ್ಗೆ ಡಿ.ಎಚ್.ಪಾಯಕ್ ಅಸಹಾಯಕತೆ ತೋಡಿಕೊಂಡಿದ್ದಾರೆ.