ತುಪ್ಪರಿ ಹಳ್ಳ ಏತ ನೀರಾವರಿ ಸರ್ವೆ ಕಾರ್ಯ ಪರಿಶೀಲಿಸಿದ ಶಾಸಕ ಅಮೃತ್ ದೇಸಾಯಿ - Mla amruta desai
ಗರಗದ ಶ್ರೀ ಮಡಿವಾಳೇಶ್ವರ ಮಠದ ಪಕ್ಕದ ಬ್ಯಾರೇಜಿನ ಬಳಿ ನಡೆಯುತ್ತಿದ್ದ ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆಯ ಸರ್ವೆ ಕಾರ್ಯವನ್ನು ಶಾಸಕ ಅಮೃತ ದೇಸಾಯಿ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.
ಧಾರವಾಡ :ಗ್ರಾಮೀಣ ಕ್ಷೇತ್ರದ ತುಪ್ಪರಿ ಹಳ್ಳ ಏತ ನೀರಾವರಿ ಹಾಗೂ ಅದರ ಜೀರ್ಣೋದ್ಧಾರ ಕಾರ್ಯಕ್ಕೆ ಡಿಪಿಅರ್ (ವಿವರವಾದ ಯೋಜನಾ ವರದಿ) ಸಲ್ಲಿಸಲು ಈಗಾಗಲೇ ಹಳ್ಳದ ಸರ್ವೇ ಕಾರ್ಯ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗರಗದ ಶ್ರೀ ಮಡಿವಾಳೇಶ್ವರ ಮಠದ ಪಕ್ಕದ ಬ್ಯಾರೇಜಿನ ಬಳಿ ಡ್ರೋನ್ ಕ್ಯಾಮೆರಾ ಮುಖಾಂತರ ನಡೆಸಲಾಗಿದ್ದ ಸರ್ವೆ ಕಾರ್ಯವನ್ನು ಶಾಸಕ ಅಮೃತ್ ದೇಸಾಯಿ ಪರಿಶೀಲಿಸಿದರು.
ಈಗಾಗಲೇ ಸರ್ವೇ ಕಾರ್ಯ ಚೆನ್ನಾಗಿ ನಡೆಯುತ್ತಿದ್ದು, ನಿಖರ ದೃಶ್ಯಾವಳಿಗಾಗಿ ಡ್ರೋನ್ ತಂತ್ರಜ್ಞಾನ ಬಳಸಲಾಗುತ್ತಿದೆ. ಕ್ಷೇತ್ರದ ರೈತರಿಗೆ ಉತ್ತಮ ಹಾಗೂ ವ್ಯವಸ್ಥಿತ ನೀರಾವರಿ ಸೌಲಭ್ಯ ನೀಡಲು ಅಚ್ಚುಕಟ್ಟಾದ ಯೋಜನೆ ರೂಪಿಸಲಾಗುವುದು ಎಂದು ಶಾಸಕರು ತಿಳಿಸಿದರು.